ವಿಜಯಪುರ:- ಸಿಂದಗಿ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಸವರಾಜ ಹುಣಸಿಗಿಡದ, ಹುಲುಗಪ್ಪ ಕೂಕಲೋರ, ಕೊಂಡಯ್ಯ ಪಾರ್ವತಿದೊಡ್ಡಿ, ರವಿಕುಮಾರ ಪಾರ್ವತಿದೊಡ್ಡಿ ಬಂಧಿತ ಆರೋಪಿಗಳು. ಆರೋಪಿಗಳು ಯಂಕಂಚಿ ಬೈಪಾಸ್ ಬಳಿ ಸಂಶಯಾಸ್ಪದವಾಗಿ ಎರಡು ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.
ಬಳಿಕ ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಂದಿದ್ದು, ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧ ಕಡೆಗೆ ಕಳ್ಳತನ ಮಾಡಿದ 16 ಲಕ್ಷದ 65 ಸಾವಿರ ಮೌಲ್ಯದ 37 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಎಸ್ ಪಿ ಋಷಿಕೇಶ ಸೋನಾವಣೆ ಹೇಳಿಕೆ ನೀಡಿದ್ದಾರೆ