ಕಲಬುರ್ಗಿ:- ಸಂಸದ ಡಿಕೆ ಸುರೇಶ್ ದೇಶ ವಿಭಜನೆ ಹೇಳಿಕೆ ವಿಚಾರಕ್ಕೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗರಂ ಆಗಿದ್ದಾರೆ..
ಕಲಬುರಗಿಯಲ್ಲಿಂದು ಮಾತನಾಡಿದ ಮುತಾಲಿಕ್ ದೇಶ ತುಂಡು ಮಾಡೋದು ದೇಶ ದ್ರೋಹ ಹೇಳಿಕೆ ದೇಶ ತುಂಡು ಮಾಡೋಕೆ ನಿಮಗೆ ಯಾರು ಹಕ್ಕು ಕೊಟ್ಟಿದ್ದಾರೆ ಅಂದ್ರು.ಆರ್ಥಿಕತೆ ಹೆಸರಲ್ಲಿ ದೇಶ ತುಂಡು ಮಾಡೋದು ಅಂದ್ರೆ ಏನರ್ಥ ಹಾಗಿದ್ರೆ ಆಗ ಹೋರಾಟ ಯಾಕೆ ಮಾಡಬೇಕಾಗಿತ್ತು
ಆಗ ಹೋರಾಟ ಮಾಡಿದ ನೀವು ಇವಾಗ ದೇಶ ಒಡೆಯೋದಕ್ಕಾ ಈಗ ದಕ್ಷಿಣ ಭಾರತ ಒಡೆಯೋದು ಅಂದ್ರೆ ಏನು ಹೇಳಿಕೆ ನಿಮ್ಮದು ಅಂತ ಕಿಡಿ ಕಾರಿದ್ರು..
ಈಶ್ವರಪ್ಪ ಒಬ್ಬ ದೇಶಭಕ್ತನಾಗಿ ನೋವು ತಡೆಯದೇ ಹೇಳಿದ್ದಾರೆ ನಾನು ಈಶ್ವರಪ್ಪನವರು ಹೇಳಿರೋ ವಿಚಾರವನ್ನ ಬೆಂಬಲಿಸುತ್ತೇನೆ ಅಂದ್ರು..