ವಿಜಯಪುರ :- ನಗರದ ಗೋಳಗುಮ್ಮಟ ಏರಿಯಾದಲ್ಲಿ ಮೆದುಳು ಜ್ವರಕ್ಕೆ ಬಾಲಕ ಬಲಿಯಾದ ಘಟನೆ ನಡೆದಿದೆ. ರಜಿತ್ ಮಿಥುನ್ ಅಳ್ಳಿಮೋರೆ ಮೃತ ಬಾಲಕ.
ಕಳೆದ ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್ ನನ್ನ ದಾಖಲಿಸಲಾಗಿತ್ತು. ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಕಾಣಿಸಿಕೊಂಡ ಬಾವು ಬಂದಿತ್ತು. ಕಾರಣ ಚಿಕಿತ್ಸೆ ಫಲಿಸದೆ ಬಾಲಕನಿಂದು ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ