ಬಾಲಿವುಡ್ ನ ಖ್ಯಾತ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಮಿಥುನ್ ಚಕ್ರವರ್ತಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ವೈದ್ಯರು ನಟನ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ನಟ ಮಿಥುನ್ ಚಕ್ರವರ್ತಿ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸದ್ಯ ನಟನಿಗೆ ಪ್ರಜ್ಞೆ ಬಂದಿದ್ದು ಇಡೀ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ತೀವ್ರ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ಮಿಥುನ ಚಕ್ರವರ್ತಿ
ಮಿಥುನ್ ಅವರನ್ನು ಫೆ.10ರ ಬೆಳಿಗ್ಗೆ 9.40 ಕ್ಕೆ ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಯಿತು. ಮೆದುಳಿನ ಎಂಆರ್ಐ ಮತ್ತು ರೇಡಿಯಾಲಜಿ ಪರೀಕ್ಷೆ ಸೇರಿದಂತೆ ಇತರ ಪ್ರಮುಖ ಪರೀಕ್ಷೆಗಳನ್ನು ಸಹ ಮಾಡಲಾಯಿತು. ಅವರು ಮೆದುಳಿಗೆ ಇಸ್ಕೆಮಿಕ್ ಸೆರೆಬ್ರೊವಾಸ್ಕುಲರ್ ಸ್ಟ್ರೋಕ್ ಆಗಿದ್ದು ಅವರಿಗೆ ಲಘು ಆಹಾರ ನೀಡಲಾಗುತ್ತಿದೆ.