ಕಾಂತಾರ ಸಿನಿಮಾದ ಬಳಿಕ ತುಳು ನಾಡಿನ ದೈವಾರಾಧನೆ ಕುರಿತು ಸಾಕಷ್ಟು ಸುದ್ದಿಯಾಗಿದೆ. ಆದರೆ ಇದೀಗ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯಲ್ಲಿ ದೈವಾರಾಧನೆ ದೃಶ್ಯಗಳನ್ನು ಪ್ರದರ್ಶಿಸಿರುವ ವಿಚಾರವಾಗಿ ಮಂಗಳೂರು, ಪಂಜೇಶ್ವರಗಳಲ್ಲಿ ಕೆಲವರು ಧಾರಾವಾಹಿ ವಿರುದ್ಧ ದೂರು ನೀಡಿದ್ದಾರೆ.
ದೈವಾರಾಧನೆಯನ್ನು ಹಣ ಮಾಡುವ ದಂಧೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಧಾರಾವಾಹಿ, ಸಿನಿಮಾಗಳಲ್ಲಿ ತಮ್ಮ ಆಚರಣೆಗಳ ಅನುಕರಣೆ ಮಾಡುತ್ತಿರುವುದು ತುಳು ನಾಡಿನ ಜನತೆಯ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೈವದ ದೃಶ್ಯಗಳನ್ನು ಧಾರಾವಾಹಿಯಿಂದ ತೆಗೆದುಹಾಕಬೇಕು, ದೈವಾರಾಧಕರ ಭಾವನೆಗೆ ಧಕ್ಕೆ ತಂದಿರುವ ಧಾರಾವಾಹಿಯ ತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ.
‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯನ್ನು ಪ್ರೀತಮ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ದೈವಾರಾಧನೆಯ ದೃಶ್ಯವನ್ನು ಚಿತ್ರೀಕರಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಪ್ರೀತಮ್ ಶೆಟ್ಟಿ, ‘2019 ಪಿಂಗಾರ ಸಿನಿಮಾನ ನಿರ್ದೆಶನ ಮಾಡಿದ್ದೇ ಅದು ಕಂಪ್ಲೀಟ್ ಆಗಿ ದೈವಾರಾಧನೆ ಬಗ್ಗೆಯೇ ಮಾಡಿದ ಸಿನಿಮವಾಗಿತ್ತು. ಆ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಜೊತೆ ಸಾಕಷ್ಟು ಪ್ರಶಸ್ತಿಗಳನ್ನ ಪಡೆದಿದ್ದೇನೆ. 2016 ರಲ್ಲಿ ಮೀನಾಕ್ಷಿ ಮದುವೆ ಎಂಬ ಧಾರಾವಾಹಿಯಲ್ಲೂ ದೇವರಾಧನೆ ತೋರಿಸಿದ್ದೇ, ಅದ್ರೆ ಅವಾಗ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ , ನಾನು ಮಂಗಳೂರಿನವನೇ ನಮ್ಮ ಮನೆಯಲ್ಲೂ ದೇವರಾಧನೆ ಇದೇ, ಈಗ ನಾವು ಆಚಾರ ವಿಚಾರ ಗಮನದಲ್ಲಿಟ್ಟುಕೊಂಡೇ ದೃಶ್ಯವನ್ನು ಚಿತ್ರೀಕರಿಸಿರುವುದು ಎಂದಿದ್ದಾರೆ.
‘ಪ್ರಶಾಂತ್ ಮೊದಲೇ ಹೇಳಿದ್ದರು. ಒಂದು ವಾರ ನಾನ್ ವೆಜ್ ಸೇವಿಸಬಾರದು ಶೂಟಿಂಗ್ ನಲ್ಲಿ ಯಾರು ಚಪ್ಪಲಿ ಹಾಕಬಾರದು ಅಂತ ನಾವೆಲ್ಲು ಅಪಹಾಸ್ಯ ಮಾಡಿಲ್ಲ. ಧಾರವಾಹಿಯಲ್ಲಿ ನಾಯಕಿ ಕೊರಗಜ್ಜನಭಕ್ತೆ ಮೊದಲಿನಿಂದಲೂ ಹೀಗಾಗಿ ಕಷ್ಟ ಬಂದಾಗ ದೈವ ಯಾವ ರೀತಿ ಪರಿಹಾರ ನೀಡುತ್ತೆ ಎಂಬುದನ್ನು ಒಳ್ಳೆ ರೀತಿಯಲ್ಲಿ ನಾವು ತೋರಿಸಿದ್ದೇವೆ ಎಲ್ಲೂ ಅಪಹಾಸ್ಯ ಮಾಡಿಲ್ಲ’ ಎಂದು ಹೇಳಿದ್ದಾರೆ.
ಧಾರಾವಾಹಿಯಲ್ಲಿನ ದೈವಾರಾಧನೆ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಮಾಡಲಾಗಿರುವ ಒತ್ತಾಯದ ಬಗ್ಗೆ ಮಾತನಾಡಿರುವ ಪ್ರೀತಮ್ ಶೆಟ್ಟಿ, ‘ಸೋಮವಾರ ಧಾರವಾಹಿಯ ಎಪಿಸೋಡ್ ಪ್ರಸಾರ ಮಾಡುವ ಬಗ್ಗೆ ಮುಖ್ಯಸ್ಥರೆಲ್ಲ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು. ಧಾರಾವಾಹಿ ಪ್ರದರ್ಶನ ಮಾಡದೇ ಇರೋ ಬಗ್ಗೆ ಈಗಾಲೇ ನಾನು ಏನೂ ಹೇಳೋದಕ್ಕೆ ಆಗಲ್ಲ. ಆದರೆ ಇನ್ನು ಮುಂದೆ ನಾನು ಈ ರೀತಿಯ ದೈವರಾಧನೆ ದೃಶ್ಯಗಳನ್ನು ಮಾಡುವುದಿಲ್ಲ’ ಎಂದು ಧಾರವಾಹಿ ನಿರ್ದೇಶಕ ಪ್ರೀತಮ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.