ಕಲಬುರಗಿ: ಎಲ್ಲ ರೀತಿಯ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಕಲಬುರಗಿಯ ಟ್ರಾಮಾ ಸೆಂಟರ್ ಇವತ್ತು ಲೋಕಾರ್ಪಣೆಯಾಯಿತು. 110 ಬೆಡ್ ಇರುವ ಈ ಟ್ರಾಮಾ ಸೆಂಟರನ್ನು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದ್ರು. ಜಿಲ್ಲಾಸ್ಪತ್ರ ಅಂಗಳದಲ್ಲಿ ನಿರ್ಮಾಣ ಮಾಡಿರುವ ತುರ್ತು ಚಿಕಿತ್ಸಾ ಘಟಕಗಳ ಕೇಂದ್ರ ಬಡವರ ಪಾಲಿಗೆ ಸಂಜೀವಿನಿ ಆಗಲಿದ್ದು,
ಇನ್ನೊಂದು ಯಾವುದೇ ಅಂಬುಲೆನ್ಸ್ ಗಳು ಖಾಸಗಿ ಆಸ್ಪತ್ರೆಗೆ ತೆರಳದೇ ಮೊದಲು ಈ ಟ್ರಾಮಾ ಸೆಂಟರ್ ಗೆ ತರಬೇಕು ಅಂತ ಸರ್ಕಾರ ಸೂಚಿಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಕೆಲವೊಂದು ನಿಗದಿತ ಶುಲ್ಕ ಭರಿಸಿದರೆ ಉಳಿದವರಿಗೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಸುತ್ತಮುತ್ತಲ ಜಿಲ್ಲೆಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಅಂತ ಜಿಲ್ಲಾಡಳಿತ ತಿಳಿಸಿದೆ.