ಕಲಬುರ್ಗಿ:- ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಪತ್ತೆ ಮಾಡುವಲ್ಲಿ ಕಲಬುರಗಿ ಪೋಲೀಸರು ಸಕ್ಸಸ್ ಆಗಿದ್ದಾರೆ.
ಆಳಂದ ತಾಲೂಕಿನ ಖಜೂರಿ ಗಡಿಯಲ್ಲಿ ದಾಳಿ ಮಾಡಿದ ಪೋಲೀಸರು ಅಕ್ಕಿ ಸಮೇತ ಲಾರಿ ಹಿಡಿದಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸುಮಾರು 20 ಕ್ಕೂ ಅಧಿಕ ಟನ್ ಪಡಿತರ ಅಕ್ಕಿ ವಶಪಡಿಸಿ ಕೇಸ್ ದಾಖಲಿಸಿದ್ದಾರೆ.