ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಡಬ್ಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಕರ ಹತ್ಯೆಯ ಎಕ್ಸ್ ಕ್ಲ್ಯೂಸಿವ್ ವಿಡಿಯೋ ಲಭ್ಯವಾಗಿದೆ.
ಆರೋಪಿ ಚಾಕುವಿನಿಂದ ಇರಿದು ಹತ್ಯೆ ಮಾಡುವ ವಿಡಿಯೋ ಲಭ್ಯವಾಗಿದ್ದು, ಆರೋಪಿ ಮೊದಲು ಹರಿ ಮಾರ್ಕೆಟಿಂಗ್ ಮಾಲೀಕ ಸುರೇಶ್ ನನ್ನ ಟಾರ್ಗೆಟ್ ಮಾಡಿದ್ದ. ಸುರೇಶ್ ಚುಚ್ಚಿ ಹೊರ ಬಂದವ್ನೇ ಮಹೇಂದ್ರನ ಮೇಲೆ ಭೀಕರ ಅಟ್ಯಾಕ್ ನಡೆದಿದೆ.
ಆರೋಪಿ ಬದ್ರಿ ಹಲ್ಲೆ ಮಾಡಿ ಹೋಗ್ತಾನೆ ಎಂದು ಮಹೇಂದ್ರ ಅಂದುಕೊಂಡಿದ್ದ. ಸ್ನೇಹಿತನನ್ನ ಉಳಿಸಲು ಹಂತಕನಿಂದ ತಪ್ಪಿಸಿಕೊಳ್ಳೋ ಪ್ರಯತ್ನವನ್ನು ಮಹೇಂದ್ರ ಮಾಡಲಿಲ್ಲ.
ಸ್ನೇಹಿತನನ್ನ ಕೊಂದವ್ನೇ ಹೊರ ಬಂದು ಮಹೇಂದ್ರಗೆ ಮನಬಂದಂತೆ ಚಾಕುವಿನಿಂದ ಚುಚ್ಚಿದ್ದಾನೆ. ಚಾಕು ಇರಿತದ ದೃಶ್ಯ ನೋಡಿದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ. ಮಹೇಂದ್ರನ ದೇಹದಿಂದ ರಕ್ತ ಸುರಿಯುತ್ತಿದ್ರು ಕೊಲೆಗಾರ ಕ್ಯಾರೇ ಅಂದಿಲ್ಲ.
Chitradurga: ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಿವೆಡ್ಡಿಂಗ್ ಶೂಟ್ ಮಾಡಿಸಿದ್ದ ಗುತ್ತಿಗೆ ಆಧಾರಿತ ಡಾಕ್ಟರ್ ವಜಾ!
ಚಾಕುವಿನಿಂದ ಮನ ಬಂದಂತೆ ಚುಚ್ಚಿ ಚುಚ್ಚಿ ಕೈಗಾಡಿಯೊಳಗೆ ಕೆಡವಿದ್ದಾರೆ. ರಕ್ತದ ಮಡುವಿನಲ್ಲಿ ಕೈಗಾಡಿಯಲ್ಲಿ ಬಿದ್ದಿದ್ದ ಮಹೇಂದ್ರ ಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಅಂಗಲಾಚ್ತಿದ್ದ. ಎಲ್ಲವನ್ನು ನೋಡಿ ಭೀತಿಯಿಂದ ಸ್ಥಳೀಯ ಜನ ನಿಂತಿದ್ದರು.
ಪೊಲೀಸ್ರು ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರ ಪ್ರಾಣ ಹಾರಿ ಹೋಗಿತ್ತು ಎನ್ನಲಾಗಿದೆ.