ಬೆಂಗಳೂರು:- ಲಕ್ಷ ಲಕ್ಷ ಶುಲ್ಕ ಪಡೆದು ವಿದ್ಯಾರ್ಥಿಗಳಿಗೆ ದೋಖಾ ಮಾಡಿರುವ ಆರೋಪ ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಟಿತ ಕಾಲೇಜು ವಿರುದ್ಧ ಕೇಳಿ ಬಂದಿದೆ.
ಹೀಗಾಗಿ ಸಿಂಧಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವಿರುದ್ಧ ವಿದ್ಯಾರ್ಥಿಗಳು ತಿರುಗಿ ಬಿದ್ದಿದ್ದಾರೆ. ಶಿಕ್ಷಕರ ಜೊತೆ ವಾಗ್ವಾದ ನಡೆಸಿದ ವಿದ್ಯಾರ್ಥಿಗಳು ಮೋಸ ಮಾಡಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ.
ನಿಮ್ಮ ಚರ್ಮ ಈ ರೀತಿ ಬದಲಾಗುತ್ತಿದ್ದ್ಯಾ!? – ಹಾಗಿದ್ರೆ ಇದು ಕ್ಯಾನ್ಸರ್!
ಆರೋಪ ಏನು?
ನಗರದ ಹೆಬ್ಬಾಳದ ಸಿಂಧಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ MBAಗೆ 82 ಸ್ಟೂಡೆಂಟ್ಸ್ ಅಡ್ಮಿಷನ್ ಆಗಿದ್ದು, ₹4,25,000 ಶುಲ್ಕ ಪೀಕಿದ್ದಾರೆ.
ಕಾಲೇಜು ಶುಲ್ಕ ಕಟ್ಟುವ ವೇಳೆ ವಿದೇಶಿ ಟ್ರಿಪ್, ಲ್ಯಾಪ್ ಟಾಪ್, ಪ್ಲೇಸ್ ಮೆಂಟ್,ಇಂಟೆನ್ಷಿಪ್ ವ್ಯವಸ್ಥೆ ಮಾಡ್ತಿವಿ ಅಂತ ಭರವಸೆ ನೀಡಿದರು. ಆದರೆ ಇದೀಗ ಎಂಬಿಎ ಕ್ಲಾಸ್ ಮುಗಿದಿದ್ದು ವಿದೇಶಿ ಟ್ರಿಪ್ ಇಲ್ಲ, ಲ್ಯಾಪ್ ಟಾಪ್ ಇಲ್ಲ. ಕಡೆಯ ಪಕ್ಷ ಜಾಬ್ ಬಿಡಿ,ಇಂಟರ್ನ್ ಶಿಪ್ ವ್ಯವಸ್ಥೆ ಮಾಡಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ. ಪ್ರಿನ್ಸಿಪಾಲ್ ಚೇಂಬರ್ ಗೆ ನುಗ್ಗಿ ಗಲಾಟೆ ಮಾಡಿರುವ ವಿದ್ಯಾರ್ಥಿಗಳು ಪ್ರತಿಭಟನೆಯ ರಣಕಹಳೆ ಮೊಳಗಿಸಿದ್ದಾರೆ.