ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ. ಆದರೆ ಅದೆಷ್ಟೋ ಜನರಿಗೆ ಅದು ಸಾಧ್ಯವಾಗಿರೋದಿಲ್ಲ. ಆದರೆ ಇದೀಗ ಜನಪ್ರಿಯ ಲ್ಯಾಪ್ಟಾಪ್ ತಯಾರಕ ಕಂಪೆನಿಗಳಲ್ಲಿ ಒಂದಾದ ಆಸುಸ್ ಭಾರತದಲ್ಲಿ ಹೊಸ ಕ್ರೋಮ್ಬುಕ್ ಲ್ಯಾಪ್ಟಾಪ್ ಬಿಡುಗಡೆ ಮಾಡಿದೆ ಇದು ನಿಮ್ಮ ಬಜೆಟ್ ಫ್ರೆಂಡ್ಲಿ ಆಗಿರಲಿದೆ.
ಆಸುಸ್ ಬಿಡುಗಡೆ ಮಾಡಿರುವ ಈ ಲ್ಯಾಪ್ ಟಾಪ್ ಗೆ ಸುಸ್ ಕ್ರೋಮ್ಬುಕ್ CM14 ಎಂದು ಹೆಸರಿಸಲಾಗಿದೆ. ಇನ್ನು ಈ ಲ್ಯಾಪ್ಟಾಪ್ MediaTek Kompanio ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ.
ಸುಸ್ ಕ್ರೋಮ್ಬುಕ್ CM14 ಲ್ಯಾಪ್ಟಾಪ್ ಮಿಲಿಟರಿ ದರ್ಜೆಯ ರಕ್ಷಣೆಯೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಇದು ಮೆಟಾಲಿಕ್ ಚಾಸಿಸ್ 180-ಡಿಗ್ರಿ ‘ಲೇ-ಫ್ಲಾಟ್’ ಹಿಂಗ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಬಳಕೆದಾರರಿಗೆ ಸ್ನೇಹಿತರು ಮತ್ತು ಗೆಳೆಯರೊಂದಿಗೆ ಸುಲಭವಾದ ವಿಷಯ ಮತ್ತು ಕಲ್ಪನೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ.
ಆಸುಸ್ ಕ್ರೋಮ್ಬುಕ್ CM14 ಲ್ಯಾಪ್ಟಾಪ್ 14 ಇಂಚಿನ ಫುಲ್ ಹೆಚ್ಡಿ ಆಂಟಿ-ಗ್ಲೇರ್ ನಾನ್-ಟಚ್ LCD ಸ್ಕ್ರೀನ್ ಹೊಂದಿದೆ. ಈ ಡಿಸ್ಪ್ಲೇಯು 1,920 x 1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 60Hz ರಿಫ್ರೆಶ್ ರೇಟ್, 220 nits ಬ್ರೈಟ್ನೆಸ್ ಮತ್ತು 16:9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 45% NTSC ಕಲರ್ ಗ್ಯಾಮಟ್ ಹಾಗೂ 77% ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡಲಿದೆ.
ಇದು MediaTek Kompanio 520 CPU ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ARM Mali G52 MP2 GPU ಸಪೋರ್ಟ್ ಅನ್ನು ಪಡೆದುಕೊಂಡಿದೆ. ಇನ್ನು ಲ್ಯಾಪ್ಟಾಪ್ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಬರಲಿದೆ. ಈ ಲ್ಯಾಪ್ಟಾಪ್ ಪ್ರೈವೆಸಿ ಶಟರ್ ಮತ್ತು ಅಂತರ್ಗತ ಫೇಸ್ AE ಫೀಚರ್ಸ್ನೊಂದಿಗೆ 720p ವೆಬ್ಕ್ಯಾಮ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಟಚ್ಪ್ಯಾಡ್ ಬೆಂಬಲಿಸುವ ಗೆಸ್ಚರ್ ಇನ್ಪುಟ್ನೊಂದಿಗೆ 405cc ವರೆಗಿನ ದಕ್ಷತಾಶಾಸ್ತ್ರದ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್ ಅನ್ನು ಸಹ ನೀಡಲಾಗಿದೆ.
ಈ ಲ್ಯಾಪ್ಟಾಪ್ ಮೆಟಾಲಿಕ್ ಚಾಸಿಸ್ 180-ಡಿಗ್ರಿ ‘ಲೇ-ಫ್ಲಾಟ್’ ಹಿಂಗ್ಡ್ ಡಿಸ್ಪ್ಲೇಯನ್ನು ಹೊಂದಿರುವುದರಿಂದ ಸುಲಭವಾಗಿ ಬೆಂಡ್ ಮಾಡಬಹುದು. ಅಲ್ಲದೆ ಬಳಕೆದಾರರರು ಸ್ನೇಹಿತರು ಮತ್ತು ಗೆಳೆಯರೊಂದಿಗೆ ಸುಲಭವಾದ ವಿಷಯ ಮತ್ತು ಕಲ್ಪನೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ನೀಡಲಿದೆ. ಇದಲ್ಲದೆ ಭದ್ರತೆಗಾಗಿ, ಫೇಸ್ ಅನ್ಲಾಕ್ ಫೀಚರ್ಸ್, ಕೆನ್ಸಿಂಗ್ಟನ್ ನ್ಯಾನೋ ಸೆಕ್ಯುರಿಟಿ ಸ್ಲಾಟ್ ಮತ್ತು ಟೈಟಾನ್ ಸಿ ಸೆಕ್ಯುರಿಟಿ ಚಿಪ್ ಅನ್ನು ಅಳವಡಿಸಲಾಗಿದೆ.
ಆಸುಸ್ ಕ್ರೋಮ್ಬುಕ್ CM14 ಲ್ಯಾಪ್ಟಾಪ್ 42Wh ಸಾಮರ್ಥ್ಯದ 2-ಸೆಲ್ ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಿಂಗಲ್ ಚಾರ್ಜ್ನಲ್ಲಿ 15 ಗಂಟೆಗಳ ಬ್ಯಾಟರಿ ಅವಧಿಯನ್ನು ಸಹ ನೀಡಲಿದೆ. ಜೊತೆಗೆ ಇದು ವೈ-ಫೈ 6 ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಬೆಂಬಲಿಸಲಿದೆ. ಇನ್ನು ಲ್ಯಾಪ್ಟಾಪ್ ಎರಡು USB 3.2 Gen 1 ಟೈಪ್-C ಪೋರ್ಟ್ಗಳು, USB 3.2 Gen 1 ಟೈಪ್-A ಪೋರ್ಟ್, 3.5mm 2-in-1 ಮೈಕ್ರೊಫೋನ್/ಹೆಡ್ಫೋನ್ ಜ್ಯಾಕ್ ಮತ್ತು ಮೈಕ್ರೊ SD ಕಾರ್ಡ್ ರೀಡರ್ ಸಹ ಇರಲಿದೆ. ಇಷ್ಟೆಲ್ಲಾ ವಿಶೇಷತೆಗಳಿರುವ ಈ ಲ್ಯಾಪ್ ಟಾಪ್ ಕೇವಲ 26,990ರೂಗೆ ನಿಮ್ಮ ಕೈ ಸೇರಲಿದೆ.