ಕಲಬುರಗಿ: ಗೋ ಶಾಲೆಯಲ್ಲಿನ ಆರು ಹಸುಗಳನ್ನ ಬೆಳಗಾಗೋದ್ರಲ್ಲಿ ಕದ್ದೊಯ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಹೊರವಲಯದ ಮಾಧವ ಗೋಶಾಲೆಯಲ್ಲಿ ಕಳ್ಳತನ ನಡೆದಿದ್ದು ನಿನ್ನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ಹಸುಗಳನ್ನ ಟೆಂಪೋದಲ್ಲಿ ಹೊತ್ತೊಯ್ದಿದ್ದಾರೆ.
ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ..ಇದು ಮಹೇಶ್ ಎಂಬುವವರಿಗೆ ಸೇರಿದ ಗೋಶಾಲೆ ಎನ್ನಲಾಗಿದೆ.ಮಧ್ಯರಾತ್ರಿ ಎಂಟ್ರಿ ಕೊಟ್ಟ ನಾಲ್ಕು ಜನರ ಗ್ಯಾಂಗ್ ಒಂದೊಂದೆ ಹಸುಗಳನ್ನ ಬಿಚ್ಚಿಕೊಂಡು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..