ಕಳೆದ ಸಾಕಷ್ಟು ಸಮಯದಿಂದ ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ. ಈ ಯುದ್ಧದ ಮಧ್ಯೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಉಕ್ರೇನ್ ಸೇನಾ ಮುಖ್ಯಸ್ಥ ವ್ಯಾಲೆರಿ ಜಲುಜ್ನಿ ಅವರನ್ನು ತೆಗೆದುಹಾಕಿದ್ದಾರೆ. ಇದೀಗ ವ್ಯಾಲೆರಿ ಸ್ಥಾನಕ್ಕೆ ಗ್ರೌಂಡ್ ಫೋರ್ಸ್ ಕಮಾಂಡರ್ ಒಲೆಕ್ಸಾಂಡರ್ ಸಿರ್ಸ್ಕಿಯನ್ನು ನೇಮಿಸಿದ್ದಾರೆ.
ಸುಮಾರು ಎರಡು ವರ್ಷಗಳ ಯುದ್ಧದ ನಂತರ ಉಕ್ರೇನ್ನ ಸೇನಾ ನಾಯಕತ್ವದಲ್ಲಿ ಇದು ಪ್ರಮುಖ ಬದಲಾವಣೆಯಾಗಿದೆ. ಇಂದಿನಿಂದ ಹೊಸ ನಿರ್ವಹಣಾ ತಂಡವು ಉಕ್ರೇನ್ ಸಶಸ್ತ್ರ ಪಡೆಗಳ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ನಾನು ಕರ್ನಲ್-ಜನರಲ್ ಸಿರ್ಸ್ಕಿಯನ್ನು ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಿದ್ದೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ ಸಶಸ್ತ್ರ ಪಡೆಗಳಿಗೆ ಯಾವ ರೀತಿಯ ನವೀಕರಣದ ಅಗತ್ಯವಿದೆ ಎಂದು ನಾವು ಚರ್ಚಿಸಿದ್ದೇವೆ. ಉಕ್ರೇನ್ ಸಶಸ್ತ್ರ ಪಡೆಗಳ ಹೊಸ ನಾಯಕತ್ವದಲ್ಲಿ ಯಾರು ಇರಬಹುದೆಂದು ನಾವು ಚರ್ಚಿಸಿದ್ದೇವು. ಈಗ ನವೀಕರಣದ ಸಮಯ ಬಂದಿದೆ ಎಂದಿದ್ದದಾರೆ.