ಬೆಳಗಾವಿ: 22 ಸಾವಿರ ಲಂಚಕ್ಕ ಬೇಡಿಕೆ ಇಟ್ಟಿದ್ದ ಹೊರಗುತ್ತಿಗೆ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಾಟಾ ಎಂಟ್ರಿ ಆಪರೇಟರ್ ಆಗಿರುವ ಸೋಮಶೇಖರ ಮಾಸ್ತಮರಡಿ ಬೆಳಗಾವಿ ಜಿಲ್ಲಾ ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೇಲ್ಡಿಡ್ ಚಲನ್ ನೀಡಲು 22 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅವಿನಾಶ್ ಧಾಮನೆಕರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. 22 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.