ಬಿಗ್ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ್ದ ನಟಿ ತನಿಷಾಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ತನಿಷಾ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಸದ್ಯ ಈ ಕೇಸ್ ನಲ್ಲಿ ತನಿಷಾಗೆ ಕ್ಲೀನ್ಚಿಟ್ ಸಿಕ್ಕಿದ್ದು ಬೆಂಕಿ ತನಿಷಾ ನಿಟ್ಟುಸಿರು ಬಿಟ್ಟಿದ್ದಾರೆ.
ಬಿಗ್ ಬಾಸ್ ನಲ್ಲಿದ್ದ ವೇಳೆ ತನಿಷಾ ಕುಪ್ಪಂಡ ಭೋವಿ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಭೋವಿ ಸಮಾಜದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪದ್ಮ ಕುಂಬಳುಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಜಾತಿನಿಂದನೆ ಆರೋಪದಡಿ ತನಿಷಾ ಕುಪ್ಪಂಡ ವಿರುದ್ಧ ಎಫ್ಐಆರ್ ದಾಖಲಾಸಿದ್ದರು.
ಈ ಪ್ರಕರಣದಲ್ಲಿ ತನಿಷಾ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಡ ಹೇರಲಾಗಿತ್ತು. ಈ ಕುರಿತಂತೆ ತನಿಷಾ ತಾನು ಆ ರೀತಿ ಮಾತನಾಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಆದರೂ, ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಸದ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ದೂರಿನ ಜೊತೆ ತನಿಷಾ ಬಿಗ್ ಬಾಸ್ ಶೋನಲ್ಲಿ ಪ್ರತಾಪ್ ಜೊತೆ ಸಂಭಾಷಣೆ ಮಾಡುವಾಗ ಭೋವಿ ಸಮಾಜದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ವಿಡಿಯೋ ಕೊಟ್ಟಿದ್ದರು. ಜಾತಿನಿಂದನೆ ಕೇಸ್ ಆಗಿದ್ದರಿಂದ ಡಿವೈಎಸ್ಪಿ ಪ್ರಕರಣ ತನಿಖೆ ಮಾಡಿದ್ದರು. ತನಿಷಾ ಬಿಗ್ ಬಾಸ್ ಶೋನಲ್ಲಿ ಬಳಕೆ ಮಾಡಿರೋ ಆಕ್ಷೇಪಾರ್ಹ ಪದ ಇರುವ ವಿಡಿಯೋ ಆಡಿಯೋ ಒಂದನ್ನ ಪೊಲೀಸರು ಎಫ್ಎಸ್ಎಲ್ಗೆ ಕಳಿಸಿಕೊಟ್ಟಿದ್ದರು. ಎರಡು ತಿಂಗಳ ಬಳಿಕ ಎಫ್ಎಸ್ಎಲ್ವರದಿ ತನಿಖಾಧಿಕಾರಿ ಕೈ ಸೇರಿದೆ. ಸದ್ಯ ಬಿಗ್ ಬಾಸ್ ನಿಂದ ಹೊರ ಬಂದಿರುವ ತನಿಷಾ ಇದೀಗ ಅಟ್ರಾಸಿಟಿ ಕೇಸ್ ನಿಂದಲು ಹೊರ ಬಂದಿದ್ದಾರೆ.