ರಾಜ್ಯದಲ್ಲಿ ಬರ ಎದುರಾಗಿ ಎಂಟು ತಿಂಗಳೇ ಗತಿಸಿದೆ. ಕೊನೆಗೂ ರಾಜ್ಯ ಸರಕಾರ ಅಂತೂ ಇಂತು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ 2 ಸಾವಿರ ಬೆಳೆ ಪರಿಹಾರ ಕಾರ್ಯಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುವ ನಿರ್ಧಾರವನ್ನು ಸರಕಾರ ಬದಲಾಯಿಸಿಕೊಂಡಿದೆ. ನೇರವಾಗಿ ಆಯಾ ಖಾತೆದಾರರ ಪಾಲಿಗೆ ಹಂತ ಹಂತವಾಗಿ ಹಣ ಜಮಾ ಆಗುತ್ತಿದೆ. ಇದರಿಂದ ರೈತರು ದಲ್ಲಾಳಿಗಳ ಮೂಲಕ ಚೆಕ್ ಪಡೆಯುವ ಸಂಪ್ರದಾಯಕ್ಕೆ ಅಂತ್ಯ ಹಾಡಿದಂತಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಚವಡಿಗಳಲ್ಲಿ ರೈತರ ಬೆಳೆಹಾನಿಯನ್ನು ರೈತರ ಖಾತೆಗಳ ಸಹಿತ ಮಾಹಿತಿ ಪ್ರಕಟಿಸಲಾಗುತ್ತಿದೆ. ಚಿಕ್ಕ ಹಿಡುವಳಿದಾರರು, ಅತ್ಯಂತ ಚಿಕ್ಕ ಹಿಡುವಳಿದಾರರು, ಒಣಬೇಸಾಯ, ನೀರಾವರಿ ಹೊಂದಿದ್ದ ರೈತಾಪಿ ವರ್ಗದ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.
ರೈತರ ಅಕೌಂಟ್ ಸ್ಥಗಿತಗೊಂಡಿರುವುದು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಲಿಂಕ್ ಆಗದೇ ಇರುವ ಹಾಗೂ ಬ್ಯಾಂಕ್ ವ್ಯವಹಾರ ಸ್ಥಗಿತಗೊಂಡಿರುವ ವಿವಿಧ ತಾಲೂಕುಗಳಲ್ಲಿನ 530 ಕ್ಕೂ ಅಧಿಕ ರೈತರಿಗೆ ಜಮಾ ಆಗುವುದಿಲ್ಲ. ಆ ರೈತರು ಸರಿಯಾದ ದಾಖಲಾತಿಗಳನ್ನು ಕಂದಾಯ ಅಧಿಕಾರಿಗಳಿಗೆ ಒಪ್ಪಿಸಬೇಕಾಗಿದೆ.
ರೈತರಿಗೆ ಬೆಳೆ ಪರಿಹಾರ ಕಾರ್ಯ ನಡೆಸಿದೆ. ಹಳ್ಳಿಗಳಲ್ಲಿ ರೈತರಿಗೆ ಜಮಾ ಆಗಿದ್ದ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಚಾವಡಿಗಳಲ್ಲಿ ಮಾಹಿತಿ ಒದಗಿಸಲಾಗಿದೆ. ಉಳಿದಂತೆ ಎಲ್ಲ ರೈತರಿಗೂ ಸೌಲಭ್ಯ ಸಿಗಲಿದೆ. ಜಿಲ್ಲೆಯಲ್ಲಿಅತಿ ಹೆಚ್ಚು ರೈತರು ನಮ್ಮ ತಾಲೂಕಿನ ಫಲಾನುಭವಿಗಳಿಗೆ ಲಭಿಸುತ್ತಿದೆ