ಕಾರವಾರ: ಪ್ರವಾಸಕ್ಕೆಂದು (Tour) ಆಗಮಿಸಿದ್ದ ಜಪಾನ್ (Japan) ಮೂಲದ ಮಹಿಳೆ (Woman) ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ (Gokarna) ನಡೆದಿದೆ. ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಮಹಿಳೆ. ಫೆಬ್ರವರಿ 05 ರಂದು ಮಹಿಳೆ ತನ್ನ ಪತಿಯೊಂದಿಗೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್ನಲ್ಲಿ ತಂಗಿದ್ದರು.
ಮರುದಿನ ಮುಂಜಾನೆ 10:30ರ ಸುಮಾರಿಗೆ ನೇಚರ್ ಕ್ಯಾಂಪಸ್ನಿಂದ ಹೊರಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. ನಾಪತ್ತೆ ಹಿನ್ನೆಲೆ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.