ಟೀಮ್ ಇಂಡಿಯಾದಿಂದ ನಾಪತ್ತೆಯಾದ್ದ ಇಶಾನ್ ಕಿಶನ್ ಬರೋಡಾದಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಇಶಾನ್ ಕಿಶನ್ ಎಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಭಾರತ ತಂಡಕ್ಕೂ ಆಯ್ಕೆ ಆಗದ ಇವರು, ಕೋಚ್ ರಾಹುಲ್ ದ್ರಾವಿಡ್ ರಣಜಿ ಆಡಿ ಎಂದು ಹೇಳಿದರು ಅಲ್ಲೂ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಇದೀಗ ಕಿಶನ್ ಬರೋಡದಲ್ಲಿ ಕಾಣಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಮತ್ತು ಇಶಾನ್ ಕಿಶನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಎದ್ದು ಕಾಣುತ್ತಿದೆ. ಈ ನಡುವೆ ಕೋಚ್ ರಾಹುಲ್ ದ್ರಾವಿಡ್ ಕೂಡ ಇಶಾನ್ ಕಿಶನ್ ಬಗ್ಗೆ ಹಲವು ಮಾತುಗಳನ್ನು ಹೇಳಿದ್ದರು, ಈ ಎಲ್ಲಾ ಊಹಾಪೋಹಗಳ ಹೊರತಾಗಿ ಇಶಾನ್ ಕಿಶನ್ ಬಗ್ಗೆ ಇದೀಗ ಹಲವು ವಿಷಯಗಳು ಬೆಳಕಿಗೆ ಬಂದಿವೆ.
ಕ್ರಿಕ್ಬಜ್ ವರದಿಯ ಪ್ರಕಾರ, ಇಶಾನ್ ಕಿಶನ್ ಪ್ರಸ್ತುತ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇಶಾನ್ ಕಿಶನ್ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ಇಲ್ಲಿ ಬೆವರು ಹರಿಸುತ್ತಿದ್ದಾರೆ. ಅಚ್ಚರಿ ವಿಷಯ ಎಂದರೆ ಅವರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಟೀಮ್ ಇಂಡಿಯಾಗೆ ಮರಳಲು ಇಶಾನ್ ಕಿಶನ್ ದೇಶೀಯ ಕ್ರಿಕೆಟ್ನಲ್ಲಿ ಆಡಬೇಕಾಗುತ್ತದೆ ಎಂದು ರಾಹುಲ್ ದ್ರಾವಿಡ್ ಹೇಳಿದಾಗ, ಕಿಶನ್ ರಣಜಿ ಟ್ರೋಫಿ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ತಂಡದ ಒತ್ತಾಯದ ಹೊರತಾಗಿಯೂ ಕಿಶನ್ ಆಟದಿಂದ ದೂರ ಉಳಿದಿದ್ದಾರೆ. ಇದೇ ವೇಳೆ ದ್ರಾವಿಡ್ ಅವರು ಇಶಾನ್ ಪುನರಾಗಮನವು ಅವರಿಗೆ ಮಾತ್ರ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದ್ದಾರೆ.