ಬೆಂಗಳೂರು: ಜಮೀನು ವ್ಯಾಜ್ಯ (Land Grabbing) ಸಂಬಂಧ ಮಾಜಿ ಡಾನ್ (Ex Don) ಜೇಡರಹಳ್ಳಿ ಕೃಷ್ಣಪ್ಪನನ್ನು (Jedarahalli Krishnappa) ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸರು ಜೇಡರಹಳ್ಳಿ ಕೃಷ್ಣಪ್ಪನನ್ನು ಅರೆಸ್ಟ್ ಮಾಡಿದ್ದಾರೆ. ಜಮೀನು ವ್ಯಾಜ್ಯ ಸಂಬಂಧ ಕೃಷ್ಣಪ್ಪ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಕೃಷ್ಣಪ್ಪನನ್ನು ಬಂಧಿಸಲಾಗಿದೆ.
16 ಎಕರೆ ಜಮೀನು ಕಬಳಿಸಿದ ಆರೋಪದಡಿ ಅರೆಸ್ಟ್ ಮಾಡಲಾಗಿದೆ. ಬೇರೆಯವರ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ್ದ ಆರೋಪದಡಿ ಮಾಜಿ ಡಾನ್ ಕೃಷ್ಣಪ್ಪನನ್ನು ಬಂಧಿಸಲಾಗಿದೆ.