ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಹಿಂದೆ ವಂಗಾ ನಿರ್ದೇಶನದ ಅರ್ಜುನ್ ರೆಡ್ಡಿ ಚಿತ್ರ ಕೂಡ ಸಖತ್ ಕಮಾಲ್ ಮಾಡಿತ್ತು. ವಂಗಾ ಕೆಲಸ ನೋಡಿ ಅದೆಷ್ಟೋ ಮಂದಿ ಆವರ ಜೊತೆ ಕೆಲಸ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಬಿಟೌನ್ ಕಿಂಗ್ ಕಂಗನಾ ಮಾತ್ರ ಬಂದ ಅವಕಾಶವನ್ನು ರಿಜೆಕ್ಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಬಿಟೌನ್ ನಲ್ಲಿ ಬರುವ ಸಾಕಷ್ಟು ಸಿನಿಮಾಗಳನ್ನ ನೋಡಿ ಕಂಗನಾ ಪ್ರತಿಕ್ರಿಯೆ ನೀಡುತ್ತಾರೆ. ತಮಗೆ ಅನಿಸಿದ್ದನ್ನು ಯಾವುದೇ ಮುಲಾಜಿಲ್ಲದೆ ಪ್ರತಿಕ್ರಿಯಿಸಿ ಸಾಕಷ್ಟು ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಸೂಪರ್ ಹಿಟ್ ಆಗಿದ್ದ ಅನಿಮಲ್ ಸಿನಿಮಾವನ್ನು ನೋಡಿ ಪ್ರತಿಕ್ರಿಯಿಸಿದ್ದ ಕಂಗನಾ ಈ ಸಿನಿಮಾ ಸ್ತ್ರಿ ವಿರೋಧಿಯಾಗಿದೆ ಎಂದಿದ್ದರು.
ಕಂಗನಾ ಹೇಳಿಕೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದ ಸಂದೀಪ್ ವಂಗಾ ಇದೀಗ ಆಕೆಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ದರು. ಅವಕಾಶ ಸಿಕ್ಕರೆ, ಪಾತ್ರಕ್ಕೆ ಕಂಗನಾ ಸೂಕ್ತ ಎನಿಸಿದರೆ ಅವರ ಬಳಿ ಹೋಗಿ ಕಥೆ ಹೇಳುತ್ತೇನೆ. ‘ಕ್ವೀನ್’ ಮತ್ತು ಇತರೆ ಸಿನಿಮಾಗಳಲ್ಲಿ ಅವರ ನಟನೆಯನ್ನು ನಾನು ಇಷ್ಟಪಟ್ಟಿದ್ದೇನೆ. ನನ್ನ ಚಿತ್ರದ ಬಗ್ಗೆ ಅವರು ನೆಗೆಟಿವ್ ಕಾಮೆಂಟ್ ಮಾಡಿದ್ದರೂ ನನಗೆ ಕೋಪ ಬರುವುದಿಲ್ಲ. ಒಟ್ಟಿನಲ್ಲಿ ಅವರ ಪರ್ಫಾರ್ಮೆನ್ಸ್ ನನಗೆ ನಿಜಕ್ಕೂ ಇಷ್ಟವಾಗಿದೆ ಎಂದು ಸಂದೀಪ್ ರೆಡ್ಡಿ ವಂಗಾ ಪ್ರತಿಕ್ರಿಯಿಸಿದ್ದರು.
ಅನಿಸಿಕೆ ಮತ್ತು ಟೀಕೆ ಎರಡು ಬೇರೆ ಬೇರೆ ಆಗಿರುತ್ತವೆ. ಎಲ್ಲ ಬಗೆಯ ಕಲೆ ಕೂಡ ವಿಮರ್ಶೆಗೆ ಮತ್ತು ಚರ್ಚೆಗೆ ಒಳಪಡಬೇಕು. ಅದು ಸಹಜವಾದ ವಿಷಯ. ಸಂದೀಪ್ ಅವರು ನನ್ನ ವಿಮರ್ಶೆಗೆ ಗೌರವ ನೀಡಿದ್ದು ನೋಡಿದರೆ ತಿಳಿಯುತ್ತದೆ. ಅವರು ಕೇವಲ ಗಂಡಸುತನದ ಸಿನಿಮಾ ಮಾಡುವುದಷ್ಟೇ ಅಲ್ಲ, ಅವರ ಆ್ಯಟಿಟ್ಯೂಡ್ ಕೂಡ ಹಾಗೆಯೇ ಇದೆ. ಧನ್ಯವಾದಗಳು ಸರ್. ಆದರೆ ನೀವು ನನಗೆ ಯಾವುದೇ ಪಾತ್ರ ನೀಡಬೇಡಿ. ನೀಡಿದರೆ ನಿಮ್ಮ ಆಲ್ಫಾ ಮೇಲ್ ಪಾತ್ರಗಳು ಸ್ತ್ರಿವಾದಿ ಆಗಿಬಿಡುತ್ತವೆ. ಆಗ ನಿಮ್ಮ ಸಿನಿಮಾಗಳು ಸೋಲುತ್ತವೆ. ನೀವು ಉತ್ತಮ ಸಿನಿಮಾ ಮಾಡುವವರು. ಇಂಡಸ್ಟ್ರಿಗೆ ನಿಮ್ಮ ಅಗತ್ಯ ಇದೆ ಎಂದು ಕಂಗನಾ ಹೇಳಿದ್ದಾರೆ.