ಚಿಕ್ಕೋಡಿ : ಬೀದರ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಊಹಾಪೋಹಗಳು ಕೇಳಿ ಬರುತ್ತಿವೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಹೋಗುವುದಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಯಕ್ಕಂಚ್ಚಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಕೇಳಿ ಬರುತ್ತಿವೆ.ಈ ಸುದ್ದಿ ನನಗೆ ಅಚ್ಚರಿ ಮೂಡಿಸಿದೆ. ಎತ್ತನ ಮಾಮರ ಎತ್ತನ ಕೋಗಿಲೆ ಎತ್ತಿಂದ ಎತ್ತ ಸಂಬಂಧವಯ್ಯಾ, ಎಲ್ಲಿಂದ ಎಲ್ಲಿಗೆ ಸಂಬಂಧ ಆ ಸುದ್ದಿಗಳು ಎಲ್ಲವೂ ಸುಳ್ಳು ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಸ್ವರ್ಧೆ ಮಾಡುವುದಿಲ್ಲ ಎಂದು ಹೇಳಿದರು.
ಇನ್ನು, ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿಲ್ಲ, ನನಗೆ ಅಥಣಿ ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ. ಅಥಣಿ ಕ್ಷೇತ್ರದ ಜನರು ಶಾಸಕರಾಗಿ ಇರುವಂತೆ ಆದೇಶವನ್ನು ಮಾಡಿದ್ದಾರೆ ನಾನು ಶಾಸಕನಾಗಿ ಇರುತ್ತೆನೆ ಎಂದು ಪ್ರತಿಕ್ರಿಯಿಸಿದರು.