ನವದೆಹಲಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತನ್ನ ಕಾರ್ಯಕರ್ತನಿಗೆ ನೀಡಿರುವ ವೀಡಿಯೋ ಸಮಾಜಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.
https://x.com/amitmalviya/status/1754551446475882528?s=20
ಭಾರತ ಜೋಡೋ ನ್ಯಾಯ ಯಾತ್ರೆ (Bharth Jodo Nyay yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಿಗೆ (Dog) ಬಿಸ್ಕತ್ತನ್ನು (Biscuit )ನೀಡಿದ್ದಾರೆ. ಆದರೆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಅವರನ್ನು ಮಾತನಾಡಿಸಲು ಪಕ್ಷದ ಕಾರ್ಯಕರ್ತರು ಬಂದಿದ್ದಾರೆ. ಆಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ.
ಘಟನೆ ಕುರಿತು ಬಿಜೆಪಿ ನಾಯಕಿ ಪಲ್ಲವಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಿಗೆ, ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ