ಇಂಗ್ಲೆಂಡ್ ವಿರುದ್ಧ ವೈಝಾಗ್ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ (209 ರನ್) ಸಿಡಿಸಿದ ನಂತರ ಮಾಸ್ಟರ್ ಬ್ಲಾಸ್ತರ್ ಸಚಿನ್ ತೆಂಡೂಲ್ಕರ್ ಗೆ ಅರ್ಪಿಸಿದ್ದಾರೆ ಯಶಸ್ವಿ ಜೈಸ್ವಾಲ್!
ವಿಶಾಖಪಟ್ಟದ ನ ಎಸಿಎ-ವಿಡಿಸಿಎ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಐಪಿಎಲ್ ತಾರೆ ಯಶಸ್ವಿ ಜೈಸ್ವಾಲ್ ದ್ವಿಶತಕ (209 ರನ್), ದ್ವಿತೀಯ ಇನಿಂಗ್ಸ್ ನಲ್ಲಿ ಶುಭಮನ್ ಗಿಲ್ ಶತಕ (104 ರನ್) ಮತ್ತು ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ (9 ವಿಕೆಟ್) ಅವರ ಪ್ರದರ್ಶನದಿಂದಾಗಿ ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್ ವಿರುದ್ಧ 106 ರನ್ ಗೆಲುವು ಸಾಧಿಸಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.
ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಗೆದ್ದ ನಂತರ ಜಿಯೋ ಸಿನಿಮಾದೊಂದಿಗೆ ಸಂವಾದ ನಡೆಸಿದ ಯಂಗ್ ಎಡಗೈ ಪ್ಲೇಯರ್ ಯಶಸ್ವಿ ಜೈಸ್ವಾಲ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.
“ನಾನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಪ್ತವಾಗಿ ಮಾತನಾಡಿದೆ. ಅವರು ನನ್ನ ದ್ವಿಶತಕವನ್ನು ಕೊಂಡಾಡಿದ್ದಲ್ಲದೆ ಮುಂದಿನ ದಿನಗಳಲ್ಲೂ ಇದೇ ರೀತಿಯ ಪ್ರದರ್ಶನ ನೀಡಲು ಸಲಹೆ ನೀಡಿದರು. ಸಮಯ ಬಹಳಾ ಮುಖ್ಯ, ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ತಿಳಿ ಹೇಳಿದರು. ಸಚಿನ್ ಸರ್ ಅವರ ಹಾರೈಕೆಗೆ ಧನ್ಯವಾದ. ಅವರು ನನ್ನ ಪಾಲಿನ ದೇವರಾಗಿದ್ದು ಸದಾ ಅಭಾರಿಯಾಗಿರುತ್ತೇನೆ,” ಎಂದು ಐಪಿಎಲ್ ತಾರೆ ಹೇಳಿದ್ದಾರೆ.