ನವದೆಹಲಿ:- ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಡಿಕೆ ಸುರೇಶ್ ಹೇಳಿಕೆ ಪ್ರಸ್ತಾಪಿಸಿ ಲೋಕಸಭೆಯಲ್ಲಿ PM ಮೋದಿ ಅವರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಬಹಿರಂಗವಾಗಿ ದೇಶ ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಒಗ್ಗೂಡಿಸುವುದು ಇರಲಿ. ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿಯ ಲೋಕಸಭೆಯ ಕೊನೆಯ ಭಾಷಣವನ್ನು ಇಂದು ಸಂಸತ್ನಲ್ಲಿ ಮಾಡಿರುವ ಮೋದಿ, ಇನ್ನೂ ಭಾರತ ದೇಶವನ್ನು ಎಷ್ಟು ತುಂಡು ಗಳನ್ನಾಗಿ ಮಾಡುತ್ತಿರಾ? ಇಷ್ಟು ಒಡೆದಿರುವುದು ಸಾಕಾಗಿಲ್ವಾ. ದೇಶವನ್ನು ಇನ್ನೆಷ್ಟು ತುಂಡು ಮಾಡಬೇಕು ಅಂದುಕೊಂಡಿದ್ದೀರಿ. ಕಾಂಗ್ರೆಸ್ನವರು ಎಂದೂ ಕೂಡ ದೇಶವನ್ನು ಜೋಡಿಸಿಲ್ಲ. ಜವಾಹರಲಾಲ್ ನೆಹರು ತಪ್ಪಿನಿಂದ ಕಾಶ್ಮೀರ ಸಮಸ್ಯೆ ಸೃಷ್ಟಿಯಾಯಿತು. ನೆಹರು ಹೊರಟು ಹೋದ್ರು, ಆದ್ರೆ ದೇಶ ನೋವು ಅನುಭವಿಸುತ್ತಿದೆ. ಇಂದು ನಾವು ಜಮ್ಮು-ಕಾಶ್ಮೀರ ಅಭಿವೃದ್ಧಿ ಮಾಡಿದ್ದೇವೆ ಎಂದು ಟಾಂಗ್ ಕೊಟ್ಟರು.
ಇನ್ನು ಸಂಸದ ಡಿ.ಕೆ.ಸುರೇಶ್ ಇತ್ತೀಚೆಗೆ ಬಜೆಟ್ ಕುರಿತು ಟೀಕಿಸುತ್ತಾ ಆಡಿದ ಪ್ರತ್ಯೇಕ ರಾಷ್ಟ್ರದ ಮಾತು ಕಾಂಗ್ರೆಸ್ ಬಿಜೆಪಿ ಮಧ್ಯೆ ಮತ್ತೊಂದು ಜಟಾಪಟಿಗೆ ಕಾರಣವಾಗಿದೆ. ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕುರಿತು ಡಿಕೆ ಸುರೇಶ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡು ಕರ್ನಾಟಕ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಖಂಡಿಸುತ್ತಿದ್ದಾರೆ. ಅಲ್ಲದೇ ಡಿಕೆ ಸುರೇಶ್ ಅವರ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು.