‘ಕಾಟೇರ’.. ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗವನ್ನು ಅದ್ರಿಂದ ಪಾರು ಮಾಡಿ, ಹೊಸ ಜೋಶ್ ತುಂಬಿದ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಈ ಚಿತ್ರ 250 ಕೋಟಿ ಕ್ಲಬ್ ಸೇರೋದ್ರ ಜೊತೆಗೆ ಅಕ್ಷರಶಃ ಇಂಡಸ್ಟ್ರಿಯನ್ನ ಜೀವಂತವಾಗಿಸಿದೆ. ಬರೋಬ್ಬರಿ 250 ಸ್ಕ್ರೀನ್ಸ್ನಲ್ಲಿ ಯಶಸ್ವಿ 50 ದಿನದತ್ತ ಪಸಂದಾಗಿ ಮುನ್ನುಗ್ಗುತ್ತಿರೋ ಕಾಟೇರನ ಅಬ್ಬರ, ಆರ್ಭಟದ ಕಥೆ ಇಲ್ಲಿದೆ ನೋಡಿ.
ಜನ ಥಿಯೇಟರ್ಗೆ ಬರ್ತಿಲ್ಲ. ಕನ್ನಡ ಸಿನಿಮಾಗಳು ಬ್ಯುಸಿನೆಸ್ ಆಗ್ತಿಲ್ಲ. ಅಯ್ಯೋ ನಿರ್ಮಾಪಕರು ಉಸಿರಾಡೋದು ಹೇಗೆ..? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಕೊಟ್ಟ ಸಿನಿಮಾ ಕಾಟೇರ. ಹೌದು.. ಬಿಗ್ ಸ್ಟಾರ್ಸ್ ಬಿಗ್ ಹಿಟ್ಸ್ ಇಲ್ಲದೆ ಸೊರಗಿ ಹೋಗಿದ್ದ ಸ್ಯಾಂಡಲ್ವುಡ್ಗೆ ಬೂಸ್ಟರ್ ಡೋಸ್ನಂತೆ ಹೊಸ ಜೋಶ್ ತುಂಬಿದ ಚಿತ್ರ ನಟ ದರ್ಶನ್ ನಟನೆಯ ಕಾಟೇರ. 2023ರ ವರ್ಷಾಂತ್ಯಕ್ಕೆ ಬಂದ ಕಾಟೇರ, ಅಚ್ಚ ಕನ್ನಡದ ಮಣ್ಣಿನ ಚಿತ್ರವಾಗಿ ನೂತನ ದಾಖಲೆ ಬರೆದಿದೆ.
ಕೆಜಿಎಫ್, ಕಾಟೇರ ಸಿನಿಮಾಗಳು ಕೂಡ ಮಾಡಲಾರದ ರೆಕಾರ್ಡ್ನ ಮಾಡಿರೋ ಕಾಟೇರ, ಫಾಸ್ಟೆಸ್ಟ್ 100 ಕ್ರೋರ್ ಬಾಕ್ಸ್ ಆಫೀಸ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡದಲ್ಲೇ ರಿಲೀಸ್ ಆದ ಈ ಚಿತ್ರ ಪರಭಾಷಿಗರನ್ನೂ ಸೆಳೆಯುವಂತೆ ಮಾಡಿದೆ. ಸದ್ಯ ಯಶಸ್ವಿ ಆರು ವಾರಗಳನ್ನ ಪೂರೈಸಿರೋ ಈ ಸಿನಿಮಾ ಬರೋಬ್ಬರಿ 250ಕ್ಕೂ ಅಧಿಕ ಸ್ಕ್ರೀನ್ಸ್ನಲ್ಲಿ 50ನೇ ದಿನದತ್ತ ಮುನ್ನುಗ್ಗುತ್ತಿದೆ.