ಪೂನಂಪಾಂಡೆ ಸಾವಿನ ಪೋಸ್ಟ್ ಹಾಕಿ ಮೆಸೇಜ್ ಕೊಡೋ ಅಗತ್ಯವಿರಲಿಲ್ಲ ಎಂದು ಪೂನಂಪಾಂಡೆ ಸಾವಿನ ಗಿಮಿಕ್ ಬಗ್ಗೆ ನಟಿ ರಾಗಿಣಿ ದ್ವಿವೇದಿ ಬೇಸರ ವ್ಯಕ್ತಪಡಿಸಿದ್ದಾರೆ. ನಂಗೂ 32 ವರ್ಷ, ಅವರಿಗೂ 32 ವರ್ಷ. ಈ ರೀತಿ ಮಾಧ್ಯಮಗಳನ್ನ ಬಳಸಿಕೊಳ್ಳುವುದು ಸರಿ ಇಲ್ಲ. ನನಗೂ ಸಾವಿನ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ಹೇಳಿದ್ದಾರೆ. ಬಳಿಕ, ಪೂನಂಪಾಂಡೆ ನನಗೇನು ಪರಿಚಯವಿಲ್ಲ. ಒಂದು ವೇದಿಕೆಯನ್ನ ಈ ರೀತಿ ಬಳಸಿಕೊಂಡಿದ್ದು ಸರಿ ಇಲ್ಲ. ಬೇರೆ ರೀತಿಯಲ್ಲೂ ಜಾಗೃತಿ ಮೂಡಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಇನ್ಸ್ಟಾದಲ್ಲಿ ಪೂನಂ ಅವರ ಮ್ಯಾನೇಜರ್ ಗರ್ಭಕೋಶ ಕಂಠ ಕ್ಯಾನ್ಸರ್ (Cancer)ನಿಂದಾಗಿ ಪೂನಂ ನಿಧನರಾಗಿದ್ದಾರೆ (Death) ಎಂದು ಪೋಸ್ಟ್ ಹಾಕಿ ಇಡೀ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಪೂನಂ ನಿಧನ ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಿತ್ತು. ಪೂನಂ ಸತ್ತಿರುವ ಸಮಾಚಾರದ ಹೊರತಾಗಿ ಬೇರೆ ಯಾವ ಫೋಟೋಗಳು ಆಚೆ ಬರಲಿಲ್ಲ. ಹಾಗಾಗಿ ಸಹಜವಾಗಿಯೇ ಸಾವಿನ ಬಗ್ಗೆ ಅನುಮಾನ ಮೂಡಿತ್ತು.
ಇದೀಗ ಪೂನಂ ಬದುಕಿರುವ ಸುದ್ದಿಯನ್ನು ಸ್ವತಃ ಪೂನಂ ಅವರೇ ನೀಡಿದ್ದಾರೆ. ತಾನು ಬದುಕಿದ್ದೇನೆ. ಹಾಗೆ ಮಸೇಜ್ ಮಾಡಲು ಕಾರಣವಿದೆ. ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸಬೇಕಿತ್ತು. ಹಾಗಾಗಿ ಈ ಪೋಸ್ಟ್ ಮಾಡಲಾಯಿತು. ದಯವಿಟ್ಟು ಈ ಕ್ಯಾನ್ಸರ್ ಕುರಿತಂತೆ ಜಾಗೃತ ವಹಿಸಿ ಎಂದು ಪೂನಂ ವಿಡಿಯೋ ಮೂಲಕ ಹೇಳಿದ್ದಾರೆ.