ಮಕ್ಕಳ ಮೆದುಳು ಬೆಳವಣಿಗೆ ಹೊಂದುವಂತಹ ಆಹಾರವನ್ನು ನೀಡಿ. ಹಾಗಾಗಿ ಹಾಲಿಗೆ ಈ ವಸ್ತುಗಳನ್ನು ಬೆರೆಸಿ ಕುಡಿಸಿರಿ.
ಮಕ್ಕಳಿಗೆ ಹಾಲಿಗೆ ಜೇನುತುಪ್ಪ ಬೆರೆಸಿ ಕೊಟ್ಟರೆ ತುಂಬಾ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೇನುತುಪ್ಪ ಮೆದುಳಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದರಿಂದ ಮಕ್ಕಳ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ.
ಅಲ್ಲದೇ ತ್ರಿಫಲ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಮಕ್ಕಳಿಗೆ ಕುಡಿಸಿರಿ. ಇದು ದೇಹವನ್ನು ನಿರ್ವಿಷಗೊಳಿಸಿ ಮನಸ್ಸನ್ನು ಚುರುಕಾಗಿಸುತ್ತದೆ. ತ್ರಿಫಲ ಪುಡಿಯಲ್ಲಿ ವಿಟಮಿನ್ ಎಬಿಸಿ ಮತ್ತು ಒಮೆಗಾ 3 ನಂತಹ ಅನೇಕ ಜೀವಸತ್ವಗಳಿವೆ. ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹಾಗೇ ಮಕ್ಕಳಿಗೆ ವಾಲ್ ನಟ್ಸ್ ಪುಡಿಯನ್ನು ಹಾಲಿನಲ್ಲಿ ಬೆರೆಸಿ ನೀಡಿ. ಅಲ್ಲದೇ ಅವರಿಗೆ ಇಷ್ಟವಾದ ಒಣಹಣ್ಣುಗಳನ್ನು ಪುಡಿಮಾಡಿ ಅದನ್ನು ಹಾಲಿನಲ್ಲಿ ಬೆರೆಸಿ ನೀಡಿ. ಇದು ಮೆದುಳಿನ ಕಾರ್ಯಕ್ಕೆ ಸಹಾಯ ಮಾಡುವಂತಹ ಪೋಷಕಾಂಶಗಳನ್ನು ಒಳಗೊಂಡಿದೆ.