ಬೆಂಗಳೂರು: ನಗರದಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.. ಅದೇ ರೀತಿ ರೋಡ್ ರೇಜ್ ಪ್ರಕರಣಗಳು ಸಹ ಜಾಸ್ತಿಯಾಗುತ್ತಿದೆ.. ಸಣ್ಣ ಪುಟ್ಟ ವಿಚಾರಗಳಿಗೆ ರಸ್ತೆಯಲ್ಲಿಯೇ ವಾಹನ ಸವಾರರು ಬೈದಾಡುತ್ತಿದ್ದಾರೆ, ಕೈ ಕೈ ಮಿಲಾಯಿಸುತ್ತಿದ್ದಾರೆ, ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ..
ಈ ಡ್ಯಾಶ್ ಕ್ಯಾಮ್ ನ ಕ್ಯಾಮಾರದಲ್ಲಿ ವಿಡಿಯೋವನ್ನು ಒಮ್ಮೆ ಸರಿಯಾಗಿ ನೋಡಿ.. ಒಬ್ಬರಿಗೊಬ್ಬರು ಇಲ್ಲಿ ಬೈಡಾಡುಕೊಳ್ಳುತ್ತಿದ್ದಾರೆ.. ಈ ಘಟನೆಗೆ ಕಾರಣ ಅಂದ್ರೆ ಅದು ರೋಡ್ ರೇಜ್ ಗಲಾಟೆ.. ಹೌದು.. ನಗರದಲ್ಲಿ ದಿನೇ ದಿನೇ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ.. ಇದೇ ತಿಂಗಳ ಒಂದನೇ ತಾರೀಖಿನಂದು ಬೇಗೂರು ರಸ್ತೆಯ ಯೆಲ್ಲೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.. ಆಟೋ ಚಾಲಕ ಮೊದಲಿಗೆ ಬಲ ಭಾಗದ ಇಂಡಿಕೇಟರ್ ಆನ್ ಮಾಡಿದ್ದಾನೆ.. ಹೀಗಾಗಿ ಹಿಂದೆ ಬರುತ್ತಿದ್ದ ಕಾರಿನ ಚಾಲಕನಿಗೆ ಇಂಡಿಕೇಟರ್ ಆನ್ ಆಗಿದ್ದರಿಂದ ಆಟೋ ಚಾಲಕ ಯಾವ ಕಡೆ ಹೋಗ್ತಾನೆ ಅಮನತ ಗೊತ್ತಾಗಿಲ್ಲ… ಹೀಗಾಗಿ ಓವರ್ ಟೇಕ್ ಮಾಡಿ ಆಟೋ ಚಾಲಕನಿಗೆ ಇಂಡಿಕೇಟರ್ ಆಫ್ ಮಾಡುವಂತೆ ಹೇಳಿದ್ದಾನೆ..
ಕಾರು ಚಾಲಕ ಇಂಡಿಕೇಟರ್ ಆಫ್ ಮಾಡು ಎಂದು ಹೇಳುತ್ತಿದ್ದಂತೆ ಆಟೋ ಚಾಲಕನಿಗೆ ಕೋಪ ನೆತ್ತಿಗೇರಿದೆ.. ಆಗ ಆಟೋವನ್ನು ಓವರ್ ಟೇಕ್ ಮಾಡಿ ನಂತರ ಇದು ನನ್ನ ಆಟೋ ನಾನು ಏನನ್ನು ಬೇಕಾದ್ರು ಆನ್ ಮಾಡ್ತೀನಿ, ಅದನ್ನೆಲ್ಲಾ ಕೇಳುವುದಕ್ಕೆ ನೀನು ಯಾರು ಅಂತ ಅವಾಚ್ಯ ಶಭ್ಧಗಳಿಂದ ನಿಂಧಿಸಿದ್ದಾನೆ.. ಆಟೋ ದಿಂದ ಕೆಳಗಿಳಿದು ಬಂದು ದೊಡ್ಡ ಹೈಡ್ರಾಮ ಮಾಡಿದ್ದಾನೆ.. ಪೊಲೀಸರಿಗೆ ಕಂಪ್ಲೆಂಟ್ ಕೊಡ್ತೀನಿ ಅಂದರು ಸಹ ಕೇಳದೇ ಅವಾಚ್ಯ ಶಭ್ಧಗಳಿಂದ ನಿಂದಿಸಿದ್ದಾನೆ.. ಇನ್ನು ಈ ಎಲ್ಲಾ ಡ್ರಾಮಗಳು ಸಹ ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆಯಾಗಿದೆ..
ರೋಡ್ ರೇಜ್ ಪ್ರಕರಣ ಒಂದು ಕ್ರಿಮಿನಲ್ ಆ್ಯಕ್ಟಿವಿಟಿಯಾಗಿದ್ದು, ಇಂತವರ ವಿರುದ್ಧ ಪ್ರಕರಣ ದಾಖಲು ಮಾಡ್ತೀವಿ ರೌಡಿ ಶೀಟ್ ಓಪನ್ ಮಾಡ್ತೀವಿ ಅಂತ ಹೇಳಿದ್ರು ಸಹ ವಾಹನ ಸವಾರರು ಮಾತ್ರ ತಲೆ ಕೆಡಿಸಿಕೊಳ್ಳದೇ ಈ ರೀತಿಯಾಗಿ ಗಲಾಟೆ ಮಾಡಿಕೊಳ್ಳುತ್ತಿರುವುದು ನಿಜಕ್ಕು ವಿಪರಿಯಾಸವೇ ಸರಿ..