ನಿದ್ದೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನಿದ್ದೆ ಅಗತ್ಯವಾಗಿದೆ ಹೀಗಾಗಿ ಪ್ರತೀ ಆರೋಗ್ಯವಂತ ವ್ಯಕ್ತಿಗೆ ಕನಿಷ್ಠ 8 ರಿಂದ 9 ಗಂಟೆಗಳ ನಿದ್ದೆ ಅಗತ್ಯವಾಗಿದೆ. ಕೆಲವೊಮ್ಮೆ ಹೇಗೆ ಮಲಗಿದರೂ ನಿದ್ದೆ ಬರುವುದಿಲ್ಲ. ಕೆಲವರಿಗೆ ಎಸಿ ಇಲ್ಲದೆ ನಿದ್ದೆ ಬರದಿದ್ದರೆ, ಇನ್ನೂ ಕೆಲವರಿಗೆ ಮೆತ್ತನೆಯ ಹಾಸಿಗೆ ಇಲ್ಲದೆ ನಿದ್ದೆ ಬರದು.
ನಿಮಗೆ ಗೊತ್ತಾ ನೆಲದ ಮೇಲೆ ಮಲಗುವುದರಿಂದ ಒಂದಷ್ಟು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅರೇ ಇದೇನಿದು ಅಂತೀರಾ? ಇಲ್ಲಿದೆ ನೋಡಿ!
ನೆಲದ ಮೇಲೆ ಮಲಗುವುದರಿಂದ ಬೆನ್ನುಮೂಳೆಯು ಉತ್ತಮ ಸ್ಥಿತಿಯಲ್ಲಿರುತ್ತದೆ. ಇದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೆಲದ ಮೇಲೆ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.
ನೆಲದ ಮೇಲೆ ಮಲಗುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದು ಯಾವುದೇ ತೊಡಕುಗಳು ಇಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದಲ್ಲದೆ, ಒತ್ತಡ, ದೈಹಿಕ- ಮಾನಸಿಕ ಅಸ್ವಸ್ಥತೆಯನ್ನು ತೊಡೆದುಹಾಕುತ್ತದೆ. ನೆಲದ ಮೇಲೆ ಮಲಗುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
ನೆಲದ ಮೇಲೆ ಮಲಗುವುದರಿಂದ ಕೆಲವು ಅನುಕೂಲಗಳು ಹಾಗೂ ಅನಾನುಕೂಲಗಳೂ ಇವೆ. ಕೀಟಗಳು ಮತ್ತು ನೆಲದ ಮೇಲಿನ ಧೂಳಿನಿಂದ ಅಲರ್ಜಿ ಇರುವವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಅದಕ್ಕಾಗಿಯೇ ನೆಲದ ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಅಲರ್ಜಿಯನ್ನು ಕಡಿಮೆ ಮಾಡಿಕೊಳಬಹುದು. ಅದೇ ರೀತಿ ಬೆನ್ನು ನೋವು ಇರುವವರು ಮತ್ತು ಗರ್ಭಿಣಿಯರು ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ನೆಲದ ಮೇಲೆ ಮಲಗಬೇಕು.