ಮುಂಬೈ: ಗರ್ಭಕಂಠದ ಕ್ಯಾನ್ಸರ್ನಿಂದ ಮೃತಪಟ್ಟ ಪೂನಂ ಪಾಂಡೆ (Poonam’s Pandey) ಸಾವಿನ ಸುತ್ತ ಅನುಮಾನದ ಹುತ್ತ ದಟ್ಟವಾಗಿ ಬೆಳೆಯಲು ಆರಂಭವಾಗಿದೆ.
ಪೂನಂ ಪಾಂಡೆ ಅವರ ಮ್ಯಾನೇಜರ್ ಅವರನ್ನು ಕೇಳಿದರೆ ನಮಗೆ ಅವರ ಸಹೋದರಿ ಅವರಿಂದ ನಿಧನರಾದ ಸುದ್ದಿ ತಿಳಿದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಖಚಿತ ಪಡಿಸಲು ಸಹೋದರಿ ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ
ಸಹೋದರಿ ಅಲ್ಲದೇ ಪೂನಂ ಪಾಂಡೆ ಅವರ ಕೆಲ ಸಂಬಂಧಿಗಳಿಗೆ ಕರೆ ಮಾಡಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಕೆಲವರ ಮೊಬೈಲಿಗೆ ಕಾಲ್ ಹೋಗತ್ತಲೇ ಇಲ್ಲ.
ಈ ಬಗ್ಗೆ ಪಾಂಡೆ ಅವರ ಪಿಆರ್ ಏಜೆನ್ಸಿ ಅವರನ್ನು ಸಂಪರ್ಕಿಸಿದಾಗ, ಬೆಳಗ್ಗೆ ಪೂನಂ ಪಾಂಡೆ ನಿಧನರಾಗಿರುವ ವಿಚಾರ ಗೊತ್ತಾಯಿತು. ನಂತರ ಅವರ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದರೆ ಅವರು ಯಾರ ಜೊತೆ ಮಾತನಾಡಿಲ್ಲ. ಕುಟುಂಬದ ಸದಸ್ಯರು ಅಧಿಕೃತವಾಗಿ ಯಾಕೆ ನಿಧನ ಸುದ್ದಿಯನ್ನು ತಿಳಿಸಿಲ್ಲ ಎಂದು ಪ್ರಶ್ನೆ ಮಾಡಿದೆ.
ಪೂನಂ ಪಾಂಡೆ ನಿಧನದ ಸುದ್ದಿಯನ್ನು ಮಾಧ್ಯಮಗಳಿಗೆ ಮ್ಯಾನೇಜರ್ ನಿಕಿತಾ ಶರ್ಮಾ ಇಮೇಲ್ ಮೂಲಕ ಕಳುಹಿಸಿದ್ದರು. ಈ ಇಮೇಲ್ನಲ್ಲಿ ನೀಡಲಾಗಿದ್ದ ಫೋನ್ ನಂಬರ್ಗೆ ಕರೆ ಮಾಡಿದಾಗ ಪಶ್ಚಿಮ ಬಂಗಾಳದ ವ್ಯಕ್ತಿಗೆ ಹೋಗಿತ್ತು. ಆ ವ್ಯಕ್ತಿಗೆ ಪೂನಂ ಪಾಂಡೆ ಯಾರು ಎನ್ನುವುದೇ ಗೊತ್ತಿರಲಿಲ್ಲ.