ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. 336 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿರುವ ಭಾರತ (Team India) ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಆರಂಭಿಕರಾಗಿ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಜೋಡಿ ಮೊದಲ ವಿಕೆಟ್ಗೆ 17.3 ಓವರ್ಗಳಲ್ಲಿ 40 ರನ್ ಕಲೆಹಾಕಿತ್ತು. ರೋಹಿತ್ 41 ಎಸೆತಗಳಲ್ಲಿ ಎದುರಿಸಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಅಗ್ರ ಕ್ರಮಾಂಕದ ಬ್ಯಾಟರ್ಗಳು ಅಲ್ಪ,ಮೊತ್ತಕ್ಕೆ ಔಟಾಗಿ ಪೆವಿಲಿಯನ್ನತ್ತ ಮುಖ ಮಾಡಿದರು. ಶುಭಮನ್ ಗಿಲ್ 46 ಎಸೆತಗಳಲ್ಲಿ 34 ರನ್, ಶ್ರೇಯಸ್ ಅಯ್ಯರ್ 59 ಎಸೆತಗಳಲ್ಲಿ 27 ರನ್, ರಜತ್ ಪಾಟಿದಾರ್ 72 ಎಸೆತಗಳಲ್ಲಿ 32 ರನ್, ಅಕ್ಷರ್ ಪಟೇಲ್ 51 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು. ಇನ್ನೂ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ 179 ರನ್ (257 ಎಸೆತ, 17 ಬೌಂಡರಿ, 5 ಸಿಕ್ಸರ್) ಹಾಗೂ ರವಿಚಂದ್ರನ್ ಅಶ್ವಿನ್ 5 ರನ್ ಗಳಿಸಿದ್ದು, ಶನಿವಾರ ಕ್ರೀಸ್ ಮುಂದುವರಿಸಲಿದ್ದಾರೆ.
ದ್ವಿಶತಕದತ್ತ ಯಶಸ್ವಿ ಚಿತ್ತ:
ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ನಡುವೆಯೂ ಏಕಾಂಗಿ ಹೋರಾಟದ ಜೊತೆಗೆ ಆಕರ್ಷಕ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಮೊದಲ ದಿನದಾಟದಲ್ಲೇ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಶನಿವಾರದ ಆಟದಲ್ಲಿ ದ್ವಿಶತಕ ಸಿಡಿಸಿ ಹಲವು ದಿಗ್ಗಜರ ದಾಖಲೆಗಳನ್ನ ಮುರಿಯುವ ಸನಿಹದಲ್ಲಿದ್ದಾರೆ