ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ (Ashok Gehlot) ಕೋವಿಡ್-19 ಹಾಗೂ ಹಂದಿ ಜ್ವರ ಪಾಸಿಟಿವ್ ಕಾಣಿಸಿಕೊಂಡಿದೆ.
ಈ ಕರಿತು ಅಶೋಕ್ ಗೆಹ್ಲೋಟ್ ಅವರೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಾನು ಪರೀಕ್ಷೆಗೆ ಒಳಗಾಗಿದ್ದು ಕೋವಿಡ್-19 ಹಾಗೂ ಹಂದಿಜ್ವರ ಪಾಸಿಟಿವ್ (Covid 19 And Swine Flu) ಎಂದು ದೃಢಪಟ್ಟಿದೆ. ಇದರಿಂದಾಗಿ ಮುಂದಿನ ಏಳು ದಿನಗಳವರೆಗೆ ನಾನು ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಬದಲಾದ ಕಾಲಮಾನದಲ್ಲಿ ಪಕ್ಷದ ಮುಖಂಡರೂ ತಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ.
ಮುಂದಿನ ಚಿಕಿತ್ಸೆಗಾಗಿ ಅಶೋಕ್ ಗೆಹ್ಲೋಟ್ ಅವರನ್ನು ಜೈಪುರದ SMS ಆಸ್ಪತ್ರೆಯ ಐಡಿಎಚ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ