ಮಕ್ಕಳಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆಯಂತೆ. ಆದರೆ ಹೊಟ್ಟೆಯಲ್ಲಿ ಹುಳ ಹೆಚ್ಚಾದರೆ ದೇಹ ಈ ಸೂಚನೆಗಳನ್ನು ನೀಡುತ್ತದೆಯಂತೆ.
ಹೊಟ್ಟೆಯಲ್ಲಿ ಹುಳು ಹೆಚ್ಚಾದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆಯಂತೆ. ಹೊಟ್ಟೆಯಲ್ಲಿ ಸೋಂಕು, ನೋವು, ಹೊಟ್ಟೆ ಸೆಳೆತ, ವಾಂತಿ, ಹಸಿವಿನ ಕೊರತೆ, ದೇಹದಲ್ಲಿ ದುರ್ಬಲತೆ, ನಾಲಿಗೆ ಬೆಳ್ಳಗಾಗುವುದು, ಕಣ್ಣು ಕೆಂಪಾಗುವುದು, ದೇಹದಲ್ಲಿ ಕಲೆಗಳು, ದದ್ದುಗಳು, ಚರ್ಮದಲ್ಲಿ ತುರಿಕೆ, ಬಾಯಿಯಲ್ಲಿ ದುರ್ವಾಸನೆ, ಕಂಡುಬರುತ್ತದೆಯಂತೆ.
ಹಾಗಾಗಿ ಈ ಹೊಟ್ಟೆಯ ಹುಳಗಳನ್ನು ನಿವಾರಿಸಲು ಹಸಿ ಪಪ್ಪಾಯವನ್ನು ಸೇವಿಸಿ. ಇದು ಹುಳಗಳನ್ನು ನಾಶ ಮಾಡುತ್ತದೆಯಂತೆ. ಹಾಗೇ ತುಳಸಿ ಎಲೆಗಳನ್ನು ಜಗಿದು ಅದರ ರಸ ಸೇವಿಸಿ. ಇದು ಹುಳಗಳನ್ನು ನಾಶ ಮಾಡುವುದರ ಜೊತೆಗೆ ಹೊಟ್ಟೆಯ ಸೆಳೆತವನ್ನು ನಿವಾರಿಸುತ್ತದೆ. ಹಾಗೇ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುದಿಸಿ ಸೇವಿಸಿ.