ಬೆಂಗಳೂರು: ದೇಶ ವಿಭಜನೆ ಹೇಳಿಕೆ ನೀಡಿದ ಸಂಸದ ಡಿ.ಕೆ ಸುರೇಶ್ (DK Suresh) ಅವರಿಗೆ ಬುದ್ಧಿವಾದ ಹೇಳುವ ಕೆಲಸ ಆಗಬೇಕು. ಹೊರತು ಅವರನ್ನು ಸಮರ್ಥಿಸುವುದಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್ಕುಮಾರ್ (V. Sunil Kumar) ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,
ಒಬ್ಬ ಜನಪ್ರತಿನಿಧಿಯಾಗಿದ್ದರೂ ಅನುದಾನ ಕಡಿಮೆ ಆಗಿದೆ ಎಂದು ದೇಶ ವಿಭಜನೆಯ ಮಾತನಾಡಿದ್ದಾರೆ. ಅದನ್ನು ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ. ಸಮರ್ಪಕ ಮಾಹಿತಿ ಇಲ್ಲದೆ, ದಕ್ಷಿಣ ಭಾರತ ವಿಭಜನೆ ಆಗಬೇಕು ಅನ್ನೋ ಕಲ್ಪನೆಯೇ ಸರಿಯಲ್ಲ. ಇವರದು ಹತಾಶೆಯ ಹೇಳಿಕೆ. ಯಾವುದೇ ಕಾರಣಕ್ಕೂ ದೇಶ ವಿಭಜನೆ ಆಗಬಾರದು ಎಂದರಲ್ಲದೆ,
Jalebi with milk: ಬಿಸಿ ಹಾಲಿನ ಜೊತೆ ಜಿಲೇಬಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಇವರ ಹೇಳಿಕೆಗೆ ಜನಾಕ್ರೋಶ ಶುರುವಾಗಿದೆ. ಅದನ್ನು ಸಮರ್ಥನೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಎರಡೂವರೆ ವರ್ಷಗಳಾದ ಬಳಿಕ ಸಿದ್ದರಾಮಯ್ಯ (Siddaramaiah) ಅವರು ಡಿಕೆಶಿಗೆ (DK Shivakumar) ಅಧಿಕಾರ ಬಿಟ್ಟುಕೊಡಲಿಲ್ಲ ಎಂದು ರಾಮನಗರವನ್ನೇ ಪ್ರತ್ಯೇಕ ರಾಜ್ಯ ಮಾಡ್ತೀರಾ ಎಂದು ಕೇಳಿದರಲ್ಲದೆ, ಹತಾಶೆಯ ಮನೋಭಾವದಿಂದ ಬೇಜವಾಬ್ದಾರಿ ಹೇಳಿಕೆ ಕೊಡಬಾರದು ಎಂದು ಹೇಳಿದರು.