ಸಮಂತಾ (Samantha) ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಮೈಯೋಸಿಟಿಸ್ ಖಾಯಿಲೆಯನ್ನು ಪಕ್ಕಕ್ಕೆ ಇಟ್ಟು ಹೊಸ ಸಾಹಸದ ಮೊದಲ ಝಲಕ್ ತೋರಿಸಿದ್ದಾರೆ. ಇನ್ನೇನು ಸ್ಯಾಮ್ ಬಣ್ಣದ ಲೋಕದ ಬದುಕು ಮುಗಿಯಿತು. ಹೀಗಂತ ಅಂದುಕೊಂಡವರಿಗೆ ಭರ್ಜರಿ ಕಾಣಿಕೆ ಕೊಡಲು ಸಜ್ಜಾಗಿದ್ದಾರೆ. ಹಾಗಿದ್ದರೆ ಸಮಂತಾ ಇನ್ಯಾವ ರೀತಿ ನಮ್ಮ ಮನೆ ಮನಕ್ಕೆ ಲಗ್ಗೆ ಹಾಕಲಿದ್ದಾರೆ ? ಅವರು ಹಂಚಿಕೊಂಡ ದಿವ್ಯ ಕನಸಾದರೂ ಏನು? ಅದರ ಮಾಹಿತಿ ಇಲ್ಲಿದೆ.
ಸಮಂತಾಗೆ ಎರಡು ವರ್ಷ ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಮೊದಲ ಕಾರಣ ಎಲ್ಲರಿಗೂ ಗೊತ್ತು. ಅದು ವರ್ಷದಿಂದ ಕಾಡುತ್ತಿರುವ ಮೈಯೋಸೀಟಿಸ್. ಅದರಿಂದ ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆ ಪಡೆದು ಬಂದರು. ಅದಕ್ಕಾಗಿ ಸಿನಿಮಾ ರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಭಕ್ತಗಣದ ಜೊತೆ ಸಂಪರ್ಕದಲ್ಲಿದ್ದರು.
ಈಗ ಹೊಸದೊಂದು ಯುದ್ಧ ಮುಗಿಸಿ ಬಂದಿದ್ದಾರೆ. ಸದ್ಯದಲ್ಲೇ ಇವರ ವೆಬ್ಸೀರೀಸ್ ಸಿಟಾಡೆಲ್ ಓಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಒಂದು ಗೆಲುವಿಗೆ ಸ್ಯಾಮ್ ಕಾದಿದ್ದಾರೆ. ಕಾರಣ ಈ ಹಿಂದಿನ ಎರಡು ಮೂರು ಸಿನಿಮಾ ಕೈ ಹಿಡಿಯಲಿಲ್ಲ. ಇದಾದಾದರೂ ಗೆದ್ದು ಬೀಗುತ್ತದಾ? ಎಂದು ಕಾತುರದಿಂದ ಕಾಯುತ್ತಿದ್ದಾರೆ.