ಗದಗ: ಗುರು ಇನ್ಸ್ಟಿಟ್ಯೂಟ್ ವತಿಯಿಂದ ಗದಗ ನಗರದಲ್ಲಿ ಇದೇ ಭಾನುವಾರ ದಿ. 11 ರಂದು ಸೂಪರ್ ಸಂಸಾರ ನಾಟಕ ಪ್ರದರ್ಶನಗೊಳ್ಳಲಿದೆ.
ಆ ಕುರಿತು ಗದಗ ನಗರದ ಪತ್ರಿಕಾಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಯಶವಂತ್ ಸರದೇಶಪಾಂಡೆ ಮಾತನಾಡಿದ್ರು.
ನಾನು ಹಾಗೂ ನಮ್ಮ ತಂಡ ಅಭಿನಯಿಸಿರೋ ಹಾಸ್ಯಭರಿತ ಸೂಪರ್ ಸಂಸಾರ ನಾಟಕ ದಿನಾಂಕ ಫೆಭ್ರುವರಿ 11 ರಂದು ವಿದ್ಯಾದಾನ ಸಮಿತಿ ಮೈದಾನದಲ್ಲಿ ಸಂಜೆ 6.30 ಕ್ಕೆ ನಡೆಯಲಿದೆ ಹಾಗಾಗಿ ಈ ಹಾಸ್ಯಭರಿತ ನಾಟಕವನ್ನು ಜನರು ನೋಡಿ ನಕ್ಕು ನಲಿದು ನಾಟಕವನ್ನು ಪ್ರೋತ್ಸಾಹಿಸಬೇಕು ಅಂದ್ರು.