ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ಹಠಾತ್ ನಿಧನ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಮಾಡೆಲ್ ಕಂ ನಟಿಯಾಗಿದ್ದ ಪೂನಂ ಪಾಂಡೆ ಸದಾ ಕಾಂಟ್ರವರ್ಸಿಗಳಿಂದ ಸದ್ದು ಮಾಡುತ್ತಿದ್ದರು. ಇದೀಗ ಕ್ಯಾನ್ಸರ್ನಿಂದ ಬಳಲುತ್ತಿದ್ದ ನಟಿ ಪೂನಂ (ಫೆ.2)ರಂದು ಇಹಲೋಕ ತ್ಯಜಿಸಿದ್ದಾರೆ.
2013ರಲ್ಲಿ ನಶಾ ಎನ್ನುವ ಸಿನಿಮಾದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿಯಾದ ಪೂನಂ ಪಾಂಡೆ 1991 ಮಾರ್ಚ್ 11 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ್ದರು. ಮಾಡೆಲ್ ಆಗಿಯೇ ಜೀವನ ಆರಂಭಿಸಿದ ಇವರು, ಗ್ಲಾಡ್ರಾಗ್ಸ್ ಮ್ಯಾನ್ಹಂಟ್ ಮತ್ತು ಮೆಗಾಮಾಡೆಲ್ ಸ್ಪರ್ಧೆಯ ಅಗ್ರ 9 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮಾಡೆಲ್ ನಂತರ ಬಾಲಿವುಡ್ನಿಂದ ಆಫರ್ ಬರಲಾರಂಭಿಸಿದವು. ಇದರಿಂದ 2013ರಲ್ಲಿ ನಶಾ ಎನ್ನುವ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಪೂನಂ ಪಾಂಡೆ ವಿವಾದಿತ ನಟಿ ಎಂತಲೇ ಹೆಚ್ಚಾಗಿ ಫೇಮಸ್ ಆಗಿದ್ದರು. ಇದಕ್ಕೆ ಕಾರಣ ಕೂಡ ಇದೆ.
2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದರೇ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದಾಗಿ ಹೇಳಿ ರಾತ್ರೋ ರಾತ್ರಿ ದೇಶದಲ್ಲೆಡೆ ಫುಲ್ ಪ್ರಚಾರ ಗಿಟ್ಟಿಸಿಕೊಂಡರು. ಇದರಿಂದ ಪೂನಂ ಯಾರೆಂಬುದನ್ನು ಜನ ಗುರುತಿಸಲು ಮುಂದಾದರು. 2011ರಲ್ಲಿ ಭಾರತ ತಂಡ ಧೋನಿ ಸಾರಥ್ಯದಲ್ಲಿ ವಿಶ್ವಕಪ್ ಗೆದ್ದಿತು. ಆದರೆ ನಾನು ಬೆತ್ತಲೆಯಾಗುವುದು ಬೇಡವೆಂದು ಕ್ರಿಕೆಟ್ ಮಂಡಳಿ ಹೇಳಿದೆ. ಇದು ಕೇವಲ ಪ್ರಚಾರಕ್ಕಾಗಿ ಮಾಡಿರುವುದು ಎಂದು ಹೇಳಿ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬೆತ್ತಲೆ ಫೋಟೋ ಹಾಕಿದ್ದರು ಎನ್ನಲಾಗಿದೆ. ಇದು ಎಷ್ಟು ಸತ್ಯವೋ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ ಎನ್ನಲಾಗಿದೆ.
2013ರಲ್ಲಿ ರಿಲೀಸ್ ಆದ ನಶಾ ಎನ್ನುವ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ಅಭಿನಯಿಸಿದ ಪೂನಂ ಟೀಚರ್ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ವಿದ್ಯಾರ್ಥಿ ಜೊತೆ ಸಂಬಂಧ ಹೊಂದಿರುವ ಎಳೆಯೇ ಕಥೆಯಾಗಿರುತ್ತದೆ. ಲವ್ ಈಸ್ ಪಾಯಿಸನ್, ಆ ಗಯಾ ಹೀರೋ, ದೀ ಜರ್ನಿ ಆಫ್ ಕರ್ಮಾ ಮೂವಿ ಸೇರಿದಂತೆ ಹೀಗೆ ಬೇರೆ ಬೇರೆ ಸಿನಿಮಾಗಳಲ್ಲಿ ಅಭಿನಯಿಸಿದ್ದರು. 2020 ಸೆಪ್ಟೆಂಬರ್ 1ರಂದು ತನ್ನ ದೀರ್ಘಕಾಲದ ಗೆಳೆಯ ಸ್ಯಾಮ್ ಬಾಂಬೆ ಜೊತೆ ಮದುವೆಯಾದರು. ಕೊರೊನಾ ಸಮಯವಾದ್ದರಿಂದ ಮದುವೆ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿಯಲಿಲ್ಲ ಎಂದು ಹೇಳಲಾಗಿದೆ.