ಶಿವಮೊಗ್ಗ:- ಪ್ರತ್ಯೇಕ ದಕ್ಷಿಣ ಭಾರತ ದೇಶದ ಬಗ್ಗೆ ಸಂಸದ ಡಿಕೆ ಸುರೇಶ್ ಮಾತಾಡಿರುವುದನ್ನು ಸಿದ್ದರಾಮಯ್ಯ ಒಪ್ಪಿಲ್ಲ, ಅವರ ನಿಲುವನ್ನು ತಾನು ಸ್ವಾಗತಿಸುವುದಾಗಿ ಈಶ್ವರಪ್ಪ ಹೇಳಿದರು.
ಸುರೇಶ್ ಮತ್ತು ಡಿಕೆ ಶಿವಕುಮಾರ್ ಜಿನ್ನಾ ಸಂಸ್ಕೃತಿಯ ಪ್ರತಿಪಾದಕರಾಗಿದ್ದಾರೆ, ಭಾರತ ಎರಡು ಹೋಳಾಗಿ ಹಿಂದೂಸ್ತಾನ-ಪಾಕಿಸ್ತಾನ ಅಗಿದ್ದು ಅವರಿಗೆ ಸಮಾಧಾನವಾಗಿಲ್ಲ, ಭಾರತೀಯರೆಲ್ಲ ಇನ್ನೂ ಆ ನೋವಿನಿಂದ ಹೊರಬಂದಿಲ್ಲ, ಅದರೆ ಇವರು ದೇಶವನ್ನು ಮತ್ತಷ್ಟು ಒಡೆಯುವ ಹುನ್ನಾರ ಮಾಡಿದಂತಿದೆ ಎಂದು ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯ ಅವರು ಸುರೇಶ್ ಹೇಳಿರುವುದನ್ನು ಒಪ್ಪಿಲ್ಲ ಓಕೆ; ಅದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯ ಗಾಂಧಿ ಏನು ಹೇಳುತ್ತಾರೆ ಅನೋದು ಬಹಳ ಮುಖ್ಯ, ಅವರ ಅಭಿಪ್ರಾಯಗಳನ್ನು ದೇಶದ ಮುಂದೆ ಇಡಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.