ಜಕಾರ್ತ: ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರನ್ನು ಸತತ ಮೂರನೇ ಬಾರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸಿಸಿಯ ಎಲ್ಲಾ ಸದಸ್ಯರು, ಶಾ ಅವರ ನಾಮನಿರ್ದೇಶನವನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಸತತ ಮೂರನೇ ಬಾರಿಗೆ ಈ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ.
ಜಯ್ ಶಾ ಅವರ ಅಧಿಕಾರ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಪ್ರಸ್ತಾಪಿಸಿದರು. ಇದಕ್ಕೆ ಉಳಿದ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಅವರು ಅಧಿಕಾರದಲ್ಲಿ ಮತ್ತೊಮ್ಮೆ ಮುಂದುವರೆಯಲಿದ್ದಾರೆ.
Jalebi with milk: ಬಿಸಿ ಹಾಲಿನ ಜೊತೆ ಜಿಲೇಬಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರ ಬಳಿಕ ಜಯ್ ಶಾ ಅವರು ಜ.2021ರಲ್ಲಿ ಈ ಅಧಿಕಾರ ವಹಿಸಿಕೊಂಡರು. ಇವರ ನಾಯಕತ್ವದಲ್ಲಿ ಎಸಿಸಿ 2022ರಲ್ಲಿ ಟಿ20 ಸ್ವರೂಪದಲ್ಲಿ ಮತ್ತು 2023ರಲ್ಲಿ ಏಕದಿನ ಸ್ವರೂಪದಲ್ಲಿ ಏಷ್ಯಾಕಪ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ ಅವರು, ಎಸಿಸಿ ಮಂಡಳಿ ನನ್ನ ಮೇಲಿಟ್ಟ ನಂಬಿಕೆಗೆ ಆಭಾರಿಯಾಗಿದ್ದೇನೆ. ಕ್ರೀಡೆಯ ಮೇಲೆ ವಿಶೇಷ ಗಮನ ಹರಿಸುವ ಮೂಲಕ ಕ್ರೀಡೆಯ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲ ಬದ್ಧರಾಗಿರಬೇಕು. ಏಷ್ಯಾದ್ಯಂತ ಕ್ರಿಕೆಟ್ನ್ನು ಪೋಷಿಸಲು ಎಸಿಸಿ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.