ಬೆಂಗಳೂರು: ಇಲ್ಲೊಂದು ಮಹಿಳೆ ತನ್ನ ಸೋದರಕ್ಕ ಬ್ಯಾಗ್ನಲ್ಲಿದ್ದ ಚಿನ್ನದ ವಡವೆಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾಳೆ… ಈ ಸಂಬಂಧ ಕಂಟ್ಮೋನೆಂಟ್ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು 25ರಂದು ಲಲಿತಾ ಹಾಗು ಆಕೆ ತಂಗಿ ಚಂದ್ರಾಶರ್ಮ ಸೇರಿದಂತೆ ಎಂಟು ಜನ ಕೇರಳದ ಪಾಲಕ್ಕಾಡ್ ನಲ್ಲಿರುವ ಸಂಬಂಧಿಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ರು.
ಮಾರನೇ ದಿನ ರೈಲಿನಲ್ಲಿ ನಗರಕ್ಕೆ ಆಗಮಿಸಿದರು.ಲಲಿತಾ ಬ್ಯಾಗನ್ನು ಚೆಕ್ ಮಾಡಿದಾಗ ಬ್ಯಾಗ್ನಲ್ಲಿದ್ದ 8.51 ಲಕ್ಷ ಮೌಲ್ಯದ 94 ಗ್ರಾಂ ತೂಕದ 2 ನೆಕ್ಲಸ್ ಕಾಣೆಯಾಗಿದ್ವು. ಈ ಬಗ್ಗೆ ಕಂಟ್ಮೋನೆಂಟ್ ರೈಲ್ವೇ ಪೊಲೀಸರಿಗೆ ಲಲಿತಾ ಅವರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಲಿತಾ ಜೊತೆ ಪ್ರಯಾಣ ಬೆಳೆಸಿದ್ದ ಎಲ್ಲರನ್ನ ಪ್ರಶ್ನಿಸಿದ್ದರು. ಅನುಮಾನ ಬಂದು ಮೇರೆಗೆ ಸೋದರ ಸಂಬಂಧಿತೆಯಾಗಿದ್ದ ಚಂದ್ರಾಶರ್ಮನನ್ನ ತೀವ್ರವಾಗಿ ಪ್ರಶ್ನಿಸಿದಾಗ ಕೃತ್ಯವೆಸಗಿರುವುದು ಒಪ್ಪಿಕೊಂಡಿದ್ದಾಳೆ ಎಂದು ರೈಲ್ವೇ ಎಸ್ಪಿ ಡಾ.ಎಸ್.ಕೆ. ಸೌಮ್ಯಲತಾ ತಿಳಿಸಿದ್ದಾರೆ.