ನಿತ್ಯ ಜೀವನಕ್ಕೆ ವಿಧವಿಧವಾದ ಪೌಷ್ಟಿಕ ತರಕಾರಿಗಳನ್ನು ಕಡಿಮೆ ಜಾಗದಲ್ಲಿ ಬೆಳೆಯುವ ತರಕಾರಿ ತೋಟವನ್ನು ಪೌಷ್ಟಿಕ ಕೈತೋಟ ಎನ್ನಲಾಗುತ್ತದೆ. ಪೌಷ್ಟಿಕ ಕೈತೋಟವನ್ನು ಬೆಳೆಸುವುದರಿಂದ ರುಚಿ ಶುಚಿಯಾದ ಹಣ್ಣು, ತರಕಾರಿ ಸಿಗುವುದರೊಂದಿಗೆ ಮನುಷ್ಯನ ದೇಹ ರಕ್ಷಣೆಗೆ
ಪೌಷ್ಟಿಕ ಕೈತೋಟವನ್ನು ಬೆಳೆಸುವುದರಿಂದ ಕೇವಲ ರುಚಿ ಶುಚಿಯಾದ ಹಣ್ಣು, ತರಕಾರಿ ದೊರೆಯುವದಷ್ಟೇ ಅಲ್ಲ ತರಕಾರಿಗಳಲ್ಲಿಮನುಷ್ಯನ ದೇಹ ರಕ್ಷಣೆಗೆ ಬೇಕಾಗುವ ಪೋಷಕಾಂಶಗಳಾದ ಖನಿಜ ಮತ್ತು ಜೀವ ಸತ್ವಗಳು ಹೇರಳವಾಗಿದ್ದು, ಅವುಗಳ ಲಾಭವೂ ಸಿಗಲಿದೆ.ತರಕಾರಿಗಳು ದೈನಂದಿನ ಜೀವನದಲ್ಲಿ ಅತೀ ಮುಖ್ಯಸ್ಥಾನವನ್ನು ಪಡೆದಿವೆ.ಅದು ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ ದಿನವೂ ಸೇವಿಸಬೇಕು.ಪೌಷ್ಟಿಕ ಕೈತೋಟದ ಮುಖ್ಯ ಉದ್ದೇಶ ಆರ್ಥಿಕ ಲಾಭವಲ್ಲದೇ ಕುಟುಂಬದ ಪೋಷಣೆಯನ್ನು ಹೆಚ್ಚುಸುವುದು ಆಗಿರುತ್ತದೆ.ಈ ಮೂಲಕ ರಾಸಾಯನಿಕವನ್ನು ಹಾಕದ ಶುದ್ಧ ತರಕಾರಿಗಳನ್ನು ಮನೆ ಮಂದಿಗೆ ಉಣಬಡಿಸುವುದಾಗಿದೆ.
ಪೌಷ್ಟಿಕ ಕೈತೋಟದ ಉಪಯೋಗಗಳು
* ಕುಟುಂಬಕ್ಕೆ ಬೇಕಾಗುವ ಕಡಿಮೆ ಅಥವಾ ಯಾವುದೇ ವೆಚ್ಚವಿಲ್ಲದ ತಾಜಾ ಮತ್ತು ಪೌಷ್ಟಿಕ ತರಕಾರಿಗಳ ಪೂರೈಕೆ
* ವರ್ಷಪೂರ್ತಿ ಕೀಟನಾಶಕ ಮತ್ತು ರಾಸಾಯನಿಕ ಮುಕ್ತ ತರಕಾರಿಗಳ ಲಭ್ಯತೆ
* ಮನೆಯಲ್ಲಿ ತೋಟದ ಹೆಚ್ಚುವರಿ ತರಕಾರಿಗಳ ಮಾರಾಟದ ಮೂಲಕ ಆದಾಯವನ್ನು ಗಳಿಸಬಹುದು
* ಮನೆಯ ಸುತ್ತಮುತ್ತಲಿನ ಖಾಲಿ ಜಾಗವನ್ನು ಉಪಯೋಗ ಮಾಡಿಕೊಳ್ಳಬಹುದು
ಪೌಷ್ಟಿಕ ಕೈತೋಟ ಮಾಡುವ ಸಂದರ್ಭದಲ್ಲಿ ಪರಿಗಣಿಸಬೇಕಾದ ಕ್ರಮಗಳು
- ಪೌಷ್ಟಿಕ ಕೈತೋಟದ ಸ್ಥಳ ಆಯ್ಕೆ
ಕೈತೋಟದ ಸ್ಥಳ ಆಯ್ಕೆ ಮಾಡುವಾಗ ಈ ಎರಡು ಅಂಶಗಳನ್ನು ಗಮನಿಸಬೇಕು
* ಪ್ರತಿದಿನ ಕೈತೋಟಕ್ಕೆ ಸೂರ್ಯನ ಬೆಳಕು ಬೀಳುವಂತಿರಬೇಕು
- ಪೌಷ್ಟಿಕ ಕೈತೋಟದ ವಿನ್ಯಾಸ ಮತ್ತು ಗಾತ್ರ
ಸಾಮಾನ್ಯವಾಗಿ ಆಯತಾಕಾರದ ವಿನ್ಯಾಸವು ಕೈತೋಟಕ್ಕೆ ಸೂಕ್ತವಾಗಿರುವುದು. 5-6 ಜನರಿರುವ ಕುಟುಂಬಕ್ಕೆ ಪ್ರತಿನಿತ್ಯ 700 ಗ್ರಾಂ ನಿಂದ 800 ಗ್ರಾಂ ನಷ್ಟು
ತರಕಾರಿಗಳನ್ನು ಒದಗಿಸಲು 25 ಅಡಿ ಉದ್ದ 4 ಅಡಿ ಅಗಲ ದಷ್ಟು ಸ್ಥಳದ ಆಯ್ಕೆ ಮಾಡಬೇಕು.
ಕುಟುಂಬದ ಸದಸ್ಯರಿಗೆ ಅನುಗುಣವಾಗಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕೈತೋಟವನ್ನು ಬೆಳೆಸಬಹುದು.
- ಸೂರ್ಯನ ಬೆಳೆಕು
ಮನೆಯ ಆವರಣದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕು ಬೀಳುವಂತಹ ಸ್ಥಳವನ್ನು ಆಯ್ಕೆಮಾಡಿಕೊಳ್ಳಬೇಕು.
ಬೆಳಕಿನ ಅತ್ಯುತ್ತಮ ಮತ್ತು ಅತ್ಯಂತ ಸಮರ್ಥ ಮೂಲ ಸೂರ್ಯ. ಸೂರ್ಯನ ಬೆಳಕು ತರಕಾರಿ ಬೆಳೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೂರ್ಯನ ಬೆಳಕು ಸಸ್ಯಗಳಿಗೆ ಶಕ್ತಿಯ ಮೂಲವಾಗಿರುವುದರಿಂದ ಪ್ರತಿದಿನ ಕನಿಷ್ಟ ಆರು ಗಂಟೆಗಳ ಕಾಲ ಸಸ್ಯಗಳಿಗೆ ಸೂರ್ಯನ ಬೆಳಕು
ಸಿಗುವ ಸ್ಥಳವನ್ನು ಆಯ್ಕೆ ಮಾಡಬೇಕು. ತರಕಾರಿಗಳ ಎತ್ತರಕ್ಕನುಗುಣವಾಗಿ ಪಶ್ಚಿಮದಿಂದ ಪೂರ್ವಕ್ಕೆ ಗಿಡಗಳನ್ನು ನೆಡಬೇಕು