ಟಾಕ್ಸಿಕ್’ (Toxic) ಸಿನಿಮಾ ಬೆನ್ನಲ್ಲೇ ಯಶ್ (Yash) ಮತ್ತೊಂದು ಬಾಲಿವುಡ್ (Bollywood) ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರಾ? ಹೀಗೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ. ಈಗಾಗಲೇ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರ ಬೆನ್ನಲ್ಲೇ ಇದೊಂದು ಸುದ್ದಿ ಹಬ್ಬಿದೆ. ಯಾವುದು ಸಿನಿಮಾ? ನಿರ್ಮಾಪಕರು ಯಾರು? ನಿಜಕ್ಕೂ ಇನ್ನೊಂದು ಬಾಲಿವುಡ್ ಸಿನಿಮಾ ಯಶ್ ಮಾಡುತ್ತಾರಾ? ಇಲ್ಲಿದೆ ಮಾಹಿತಿ.
ಯಶ್ ಈಗ ಎಲ್ಲಾ ಭಾಷೆಗಳಲ್ಲೂ ಸಲ್ಲುತ್ತಿದ್ದಾರೆ. ಅದಕ್ಕೆ ಕಾರಣ ಕೆಜಿಎಫ್. ಈಗಾಗಲೇ ‘ಟಾಕ್ಸಿಕ್’ ಸಿನಿಮಾಗೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಗೀತು ಮೋಹನ್ದಾಸ್ ನಿರ್ದೇಶನದ ಸಿನಿಮಾ ಶೂಟಿಂಗ್ ಆರಂಭ ಇನ್ನೇನು ಹತ್ತಿರದಲ್ಲಿದೆ. ಅದಕ್ಕೆ ಏನೇನು ಬೇಕು ಎಲ್ಲವನ್ನು ಸಜ್ಜು ಮಾಡಿಕೊಂಡಿದ್ದಾರೆ ಯಶ್ & ಟೀಮ್. ಈ ಹೊತ್ತಲ್ಲೇ ಇಲ್ಲೊಂದು ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ನ ಮತ್ತೊಂದು ಸಿನಿಮಾದಲ್ಲಿ ಯಶ್ ನಟಿಸಲು ಒಪ್ಪಿದ್ದಾರೆ. ಅದಕ್ಕಾಗಿ ಮಾತು ಕತೆ ಕೂಡ ನಡೆದಿದೆ ಎನ್ನಲಾಗಿದೆ. ಆ ನಿರ್ಮಾಣ ಸಂಸ್ತೆಯೇ ಶಾರುಖ್ ಖಾನ್ (Sharukh Khan) ಒಡೆತನದ ರೆಡ್ ಚಿಲ್ಲೀಸ್
ಬಾಲಿವುಡ್ನ ಮತ್ತೊಂದು ದೊಡ್ಡ ನಿರ್ಮಾಣ ಸಂಸ್ಥೆ ಯಶ್ ಜೊತೆ ಸಿನಿಮಾ ಮಾಡೋಕೆ ನಿರ್ಧರಿಸಿದೆಯಂತೆ. ಹೀಗೊಂದು ಮಾಹಿತಿ ಸದ್ಯ ಹರಿದಾಡುತ್ತಿದ್ದು, ಶಾರೂಕ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಕಂಪನಿ ಯಶ್ ಜೊತೆ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. ಹಾಗಾಗಿ ಒಟ್ಟಿಗೆ ಸಿನಿಮಾ ಮಾಡುವ ತಯಾರಿ ಸಾಗ್ತಿದೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಖ್ಯಾತ ಬಾಲಿವುಡ್ ನಟನ ನಿರ್ಮಾಣ ಸಂಸ್ಥೆಯಲ್ಲಿ ನಟಿಸೋದನ್ನು ಕಾಣಲು ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ