ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹತ್ತು ವರ್ಷ ಆಯ್ತು.ಆದರೆ ಇನ್ನೂ ಚಾಲಕ ರಹಿತ ಟ್ರೈನ್ ಹಳಿಗೆ ಬಂದಿಲ್ಲ..ಬೇರೆ ಬೇರೆ ದೇಶಗಳಲ್ಲಿ ಈಗಾಗಲೇ ಚಾಲಕನಿಲ್ಲದೆ ಸ್ವಯಂಚಾಲಿತ ಟ್ರೈನ್ ಓಡುತ್ತದೆ.ಇದೇ ಮಾದರಿಯಲ್ಲಿ ಬೆಂಗಳೂರು ಮೆಟ್ರೋದಲ್ಲೂ ಚಾಲಕ ರಹಿತ ಮೆಟ್ರೋ ಓಡಿಸಲು ಮೆಟ್ರೋ ನಿಗಮ ಮುಂದಾಗಿದ್ದು,ಇದಕ್ಕೆ ಅಂತ ಎಲ್ಲಾ ರೀತಿಯ ಸಿದ್ದತೆಗಳು ಆರಂಭವಾಗಿವೆ.ಹಾಗಾದರೆ ಯಾವತ್ತಿನಿಂದ ಡ್ರೈವರ್ ಲೆಸ್ ಟ್ರೈನ್ ಓಡುತ್ತೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿಯಲ್ಲಿ.
ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಒಂದು ದಶಕ ಕಳೆದಿದೆ.ಈಗಾಗಲೇ ನಗರದ ನಾಲ್ಕು ದಿಕ್ಕಿನಲ್ಲಿ ಮೆಟ್ರೋ ಓಡಾಟ ನಡೆಸುತ್ತಿದ್ದು, ಜನ ಕೂಡ ಸಿಕ್ಕಪಟ್ಟೆ ಪಿಧಾ ಆಗಿದ್ದಾರೆ.ಸದ್ಯ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಚಾಲಕರ ಮೂಲಕ ಮೆಟ್ರೋ ರನ್ ಮಾಡಲಾಗ್ತಿದೆ.ಆದ್ರೆ ಚಾಲಕ ಮೂಲಕ ಓಡುತ್ತಿರೋ ಮೆಟ್ರೋ ಚಾಲಕನ ತಪ್ಪು ಗಳಿಂದ ಆಗಾಗ ಸ್ಥಗಿತವಾಗ್ತಿದೆ.ಹೀಗಾಗಿ ಇದೀಗ ಚಾಲಕ ರಹಿತ ಮೆಟ್ರೋ ರೈಲು ಓಡಿಸಲು ನಮ್ಮ ಮೆಟ್ರೋ ನಿಗಮ ಮುಂದಾಗಿದೆ. ಟ್ರೈನ್ನ್ನ ಕಾರ್ಯಾಚರಣೆಗೊಳಿಸಲು ಈಗಾಗಲೇ ಸಕಲ ಸಿದ್ದತೆ ನಡೆದಿದೆ.ಬೇರೆ ದೇಶಗಳಲ್ಲಿ ಚಾಲಕನಿಲ್ಲದೆ ಸ್ವಯಂಚಾಲಿತವಾಗಿ ಚಲಿಸುವ ರೈಲು ವ್ಯವಸ್ಥೆಯನ್ನು ಬಹಳ ವರ್ಷಗ ಹಿಂದೆಯೇ ಅನುಷ್ಠಾನಗೊಳಿಸಲಾಗಿದೆ.ಆದರೆ ನಮ್ಮ ಮೆಟ್ರೊ ಯೋಜನೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೆಚ್ಚು ಅನುಭವ ಬಂದಿರುವುದರಿಂದ ಇನ್ಮುಂದೆ ಚಾಲಕ ರಹಿತ ವ್ಯವಸ್ಥೆಯನ್ನು ತರಲು ಮುಂದಾಗಿದೆ.ಶೀಘ್ರದಲ್ಲೇ ಆರಂಭವಾಗಲಿರೋ ಬೊಮ್ಮಸಂದ್ರ ಟು ಆರ್ವಿ ರಸ್ತೆ ಮಾರ್ಗದಲ್ಲಿ ಚಾಲಕರ ರಹಿತ ಟ್ರೈನ್ ಓಡಿಸಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಳ್ತಿದೆ,.
ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಸಿಗ್ನಲಿಂಗ್ ಸಿಸ್ಟಮ್ ತಂತ್ರಜ್ಞಾನವನ್ನು ಹಳದಿ ಮಾರ್ಗದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಚಾಲಕ ರಹಿತ ವ್ಯವಸ್ಥೆಗೆ ರೂಪಿಸಿರುವ ತಂತ್ರಜ್ಞಾನವಾಗಿದ್ದು, ಇದನ್ನು ಬಳಸಿಕೊಂಡು ರೈಲನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ.ಮೊದಲ ಹಂತದಲ್ಲಿ 15 ಬೋಗಿಗಳು ಬರಲಿವೆ. ಬಂದ ಟ್ರೈನ್ ಗಳನ್ನ ಆರ್ವಿ ರಸ್ತೆ, ರಾಗಿಗುಟ್ಟ, ಜಯದೇವ, ಬಿಟಿಎಂ ಲೇಔಟ್, ಬೊಮ್ಮಸಂದ್ರ ಸೇರಿ 16 ನಿಲ್ದಾಣಗಳಲ್ಲಿ ಓಡಲಿದೆ.
ಹೊಸ ತಂತ್ರಜ್ಞಾನದಿಂದ ಚಾಲಕರ ತಪ್ಪುಗಳೇ ಇಲ್ಲದಂತೆ ಮಾಡಬಹುದು. ಚಾಲಕರು ರೈಲು ಚಲಾಯಿಸುವಾಗ ಸಣ್ಣ ತಪ್ಪು ಮಾಡಿದರೂ ಸಂಚಾರ ಸ್ಥಗಿತಗೊಳ್ಳುತ್ತದೆ.ನಗರದ ಹಲವು ಮೆಟ್ರೋ ಕಡೆ ನಿಲ್ದಾಣಕ್ಕೆ ಪ್ರವೇಶಿಸುವ ಮಾರ್ಗದಲ್ಲಿ ಸಂಕೀರ್ಣವಾದ ತಿರುವು ಇದೆ. ಹಲವು ಬಾರಿ ಈ ತಿರುವಿನಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೇಗವಾಗಿ ರೈಲು ಚಲಾಯಿಸಿದ್ದರಿಂದ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದ್ದರು. ಎರಡನೇ ಹಂತದ ಯೋಜನೆಯ ಮಾರ್ಗದಲ್ಲಿ ಹಲವಾರು ತಿರುವುಗಳಿವೆ. ಇಂತಹ ತಿರುವುಗಳಲ್ಲಿ ಬಹಳ ಜಾಗರೂಕತೆಯಿಂದ ರೈಲು ಚಲಾಯಿಸಬೇಕಿದೆ. ಇದು ಮಾತ್ರವಲ್ಲದೆ ರೈಲು ಕಾರ್ಯಾಚರಣೆಯ ಕೆಲಸದಲ್ಲಿ ಸಣ್ಣ ತಪ್ಪುಗಳನ್ನು ಮಾಡಿದರೂ ರೈಲು ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದರ ಬದಲು ಸ್ವಯಂಚಾಲಿತ ತಂತ್ರಜ್ಞಾನವನ್ನು ಬಳಸಿಕೊಂಡರೆ ಮಾನವ ತಪ್ಪುಗಳನ್ನು ಶೂನ್ಯಗೊಳಿಸಬಹುದು.
ಒಟ್ಟಿನಲ್ಲಿ ತಂತ್ರಜ್ಜಾನವನ್ನ ಆಪಟೇಟ್ ಮಾಡಿ ಚಾಲಕ ರಹಿತ ಮೆಟ್ರೋ ಓಡಿಬೇಕು ಅಂತ ನಮ್ಮ ಮೆಟ್ರೋ ಅಧಿಕಾರಿಗಳು ಮುಂದಾಗಿದ್ದಾರೆ. ಮುಂದಿನ ತಿಂಗಳಿನಲ್ಲಿ ಚೀನಾದಿಂದ ಟ್ರೈನ್ ಗಳು ಆಗಮನ ಆಗಲಿವೆ.ಆದ್ರೆ ಡ್ರೈವರ್ ಲೆಸ್ ಟ್ರೈನ್ ನಮ್ಮ ಮೆಟ್ರೋಗೆ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಅನುಷ್ಠಾನವಾದ ಬಳಿಕವೇ ಗೊತ್ತಾಗಲಿದೆ.