ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವಾಲಯವು ಬಿಗ್ ಅಪ್ಡೇಟ್ವೊಂದನ್ನು ನೀಡಿದೆ. ಜನವರಿ 31ರ ಒಳಗಾಗಿ ಫಾಸ್ಟ್ಟ್ಯಾಗ್ನ ಕೆವೈಸಿ ಮಾಡಿಸದೇ ಇದ್ದರೆ, ಫಾಸ್ಟ್ಟ್ಯಾಗ್ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದೆ.
ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ?
ವಾಹನ ಚಲಿಸುತ್ತಿರುವಾಗಲೇ ಸ್ಕ್ಯಾನರ್ಗಳು ಫಾಸ್ಟ್ಯಾಗ್ ಅನ್ನು ಸ್ಕ್ಯಾನ್ ಮಾಡುತ್ತವೆ. ನಿಗದಿತ ಟೋಲ್ ಹಣವನ್ನು ಅಕೌಂಟ್ನಿಂದ ಕಡಿತಗೊಳಿಸಲಾಗುತ್ತದೆ. ಈ ಫಾಸ್ಟ್ಯಾಗ್ ಸಾಧನದಲ್ಲಿ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್ಎಫ್ಐಡಿ) ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಅದರ ಟ್ಯಾಗ್ ಅನ್ನು ವಾಹನದ ವಿಂಡ್ಸ್ಕ್ರೀನ್ಗೆ ಅಂಟಿಸಲಾಗಿರುತ್ತದೆ. ಟೋಲ್ ಪ್ಲಾಜಾ ಬಳಿ ಸ್ಕ್ಯಾನರ್ ಈ ಟ್ಯಾಗ್ ಅನ್ನು ಸ್ಕ್ಯಾನ್ ಮಾಡಿ ಗುರುತಿಸುತ್ತದೆ.
ಫಾಸ್ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡುವ ಕ್ರಮ
- ಹೆದ್ದಾರಿ ನಿರ್ವಹಣೆ ಸಂಸ್ಥೆಯಾದ ಐಎಚ್ಎಂಸಿಎಲ್ನ ಫಾಸ್ಟ್ಯಾಗ್ ಪೋರ್ಟಲ್ಗೆ ಹೋಗಿ: fastag.ihmcl.com/
- ನಿಮ್ಮ ನೊಂದಾಯಿತ ಮೊಬೈಲ್ ನಂಬರ್ ಹಾಗೂ ಪಾಸ್ವರ್ಡ್ ಅಥವಾ ಒಟಿಪಿ ಬಳಸಿ ಲಾಗಿನ್ ಆಗಿ.
- ಡ್ಯಾಶ್ಬೋರ್ಡ್ನಲ್ಲಿ ಮೈ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.
- ಇದರಲ್ಲಿ ನೀವು ಹಿಂದೆ ನೊಂದಾಯಿಸುವಾಗ ಸಲ್ಲಿಸಿದ್ದ ನಿಮ್ಮ ಕೆವೈಸಿ ವಿವರವನ್ನು ಕಾಣಬಹುದು.
- ಕೆವೈಸಿ ಮೇಲೆ ಕ್ಲಿಕ್ ಮಾಡಿ ‘ಕಸ್ಟಮರ್ ಟೈಪ್’ ಅನ್ನು ಆಯ್ಕೆ ಮಾಡಿ
- ಎಲ್ಲಾ ವಿವರ ಭರ್ತಿ ಮಾಡಿ. ಆಧಾರ್ ಇತ್ಯಾದಿ ಐಡಿ ಮತ್ತು ವಿಳಾಸ ಸಾಕ್ಷ್ಯ ದಾಖಲೆಗಳನ್ನು ಸಲ್ಲಿಸಿ.
ಈ ಪ್ರಕ್ರಿಯೆ ಮುಗಿದ ಬಳಿಕ 7 ಕಾರ್ಯ ದಿನಗಳಲ್ಲಿ ಕೆವೈಸಿ ಅಪ್ಡೇಟ್ ಆಗುತ್ತದೆ.
ಕೆವೈಸಿಗೆ ಬೇಕಾದ ದಾಖಲೆಗಳು
ಕೆವೈಸಿ ಎಂದರೆ ನೋ ಯುವರ್ ಕಸ್ಟಮರ್ ಎಂದು. ಅಂದರೆ ಗ್ರಾಹಕರ ಬಗ್ಗೆ ಸಂಸ್ಥೆಗಳು ಆಗಾಗ್ಗೆ ಮಾಹಿತಿ ಅಪ್ಡೇಟ್ ಮಾಡುತ್ತಿರಬೇಕು. ಈ ಕೆಳಗಿನ ದಾಖಲೆಗಳು ಫಾಸ್ಟ್ಯಾಗ್ ಕೆವೈಸಿಗೆ ಬೇಕಾಗಬಹುದು:
- ವಾಹನ ನೊಂದಣಿ ಪತ್ರ
- ಐಡಿ ದಾಖಲೆ
- ವಿಳಾಸ ದಾಖಲೆ
- ಪಾಸ್ಪೋರ್ಟ್ ಗಾತ್ರದ ಫೋಟೋ
ಇಲ್ಲಿ ಐಡಿ ಮತ್ತು ಅಡ್ರೆಸ್ ಪ್ರೂಫ್ಗೆ ಪಾಸ್ಪೋರ್ಟ್, ವೋಟರ್ ಐಡಿ, ಆಧಾರ್ ಕಾರ್ಡ್, ಡಿಎಲ್ ಅಥವಾ ಪ್ಯಾನ್ ಕಾರ್ಡ್ ಅನ್ನು ಬಳಸಬಹುದು.