ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಗೆ ಅದ್ದೂರಿ ತೆರೆ ಬಿದ್ದಿದೆ. ಈ ಸೀಸನ್ ನಲ್ಲಿ ಅತಿ ಹೆಚ್ಚು ಚರ್ಚೆ ಆಗಿದ್ದು ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ಅವರ ವಿಷಯ. ಮೊದಲು ಸ್ನೇಹಿತರಾಗಿದ್ದ ಅವರು ನಂತರ ಬೇರೆ-ಬೇರೆ ಆದರು.
ಹಲವು ಬಾರಿ ಈ ಸ್ನೇಹವನ್ನು ಮುಂದುವರಿಸಲು ಕಾರ್ತಿಕ್ ಪ್ರಯತ್ನಿಸಿದರೂ ಕೂಡ ಅದಕ್ಕೆ ಸಂಗೀತಾ ಶೃಂಗೇರಿ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಲಿಲ್ಲ. ಈಗ ಬಿಗ್ ಬಾಸ್ ಆಟ ಅಂತ್ಯವಾಗಿದೆ. ಕಾರ್ತಿಕ್ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಸಂಗೀತಾ ಜೊತೆ ಸ್ನೇಹ ಮುಂದುವರಿಸುವ ಕುರಿತು ತಮ್ಮ ನಿರ್ಧಾರ ಏನು ಎಂಬುದನ್ನು ಕಾರ್ತಿಕ್ ಮಹೇಶ್ ತಿಳಿಸಿದ್ದಾರೆ. ‘
ಬಿಗ್ ಬಾಸ್ ಗೆದ್ದ ಬಳಿಕ ಕಾರ್ತಿಕ್ಗೆ ಸಂಗೀತಾ ಏನು ಹೇಳಿದರು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಆ ಪ್ರಶ್ನೆಗೆ ಕಾರ್ತಿಕ್ ಮಹೇಶ್ ಉತ್ತರಿಸಿದ್ದಾರೆ. ‘ಅವರು ಏನೂ ಹೇಳಲಿಲ್ಲ. ವಿಶ್ ಮಾಡಿದರು ಅಷ್ಟೇ’ ಎಂದು ಕಾರ್ತಿಕ್ ಹೇಳಿದ್ದಾರೆ. ‘ಸಂಗೀತಾ ಜೊತೆ ನಿಮ್ಮ ಸ್ನೇಹ ಮುಂದುವರಿಯುತ್ತಾ’ ಎಂದು ಕೇಳಿದ್ದಕ್ಕೆ ಕಾರ್ತಿಕ್ ಅವರು ಮನದ ಮಾತನ್ನು ಹಂಚಿಕೊಂಡಿದ್ದಾರೆ.
ನಾನು ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಇದನ್ನು ಹೇಳಿದ್ದೆ. ಸ್ನೇಹಕ್ಕಾಗಿ ನಾನು ಈಗಲೂ ಸೋಲೋಕೆ ಸಿದ್ಧ ಎಂದು ಲೆಟರ್ ಬರೆದು ಹೇಳಿದ್ದೆ. ನಿಮ್ಮ ಸ್ನೇಹವನ್ನು ಉಪಯೋಗಿಸಿಕೊಳ್ಳುವ ಉದ್ದೇಶ ನನಗೆ ಇಲ್ಲ. ಮುಖದಲ್ಲಿ ಒಂದು ನಗು ಮತ್ತು ನಾಲ್ಕು ಒಳ್ಳೆಯ ಮಾತು ಸಾಕು. ಯಾಕೆಂದರೆ, ಇರುವುದು ಒಂದು ವಾರ ಮಾತ್ರ ಅಂತ ನಾನು ಹೇಳಿದ್ದೆ. ಆದರೆ ಮರುದಿನ ತುಂಬ ಸಣ್ಣ ವಿಷಯಕ್ಕೆ ಮತ್ತೆ ಜಗಳ ಆಯಿತು. ಹಾಗಾಗಿ ಅದು ಹಂಗೆ ಇದ್ದರೇನೇ ಒಳ್ಳೆಯದು’ ಎಂದು ಕಾರ್ತಿಕ್ ಮಹೇಶ್ ಹೇಳಿದ್ದಾರೆ.
ನಾನು ಕಪ್ ಹಿಡಿದುಕೊಂಡ ಬಂದಾಗ ಎಲ್ಲರೂ ಖುಷಿಪಟ್ಟರು. ವಿನಯ್ ಔಟ್ ಆಗಿದ್ದರೂ ಕೂಡ ಕಪ್ ಹೊಡೆದುಕೊಂಡು ಬಾ ಅಂತ ನನಗೆ ಹೇಳಿದ್ದ. ಅದೆಲ್ಲ ಅವರ ಪ್ರೀತಿ. ತನಿಷಾ ಕೂಡ ಹೊರಗಡೆ ಹೋದ ನಂತರವೂ ಬೆಂಬಲ ನೀಡಿದರು. ಆಟಕ್ಕಾಗಿ ನಾನು ಅವಳನ್ನು ಬಿಟ್ಟುಕೊಟ್ಟರೂ ಅವಳು ನನ್ನನ್ನು ಬಿಟ್ಟುಕೊಡಲಿಲ್ಲ. ಅದಕ್ಕೆ ನಾನು ಅವಳಿಗೆ ಋಣಿ ಆಗಿರುತ್ತೇನೆ. ನನ್ನ ಗೆಲುವನ್ನು ಅವರ ಗೆಲುವು ಎಂಬ ರೀತಿಯಲ್ಲಿ ಖುಷಿಪಟ್ಟರು’ ಎಂದಿದ್ದಾರೆ ಕಾರ್ತಿಕ್ ಮಹೇಶ್.