ತುಮಕೂರು: ಬೇರೆ ಕಡೆ ಹನುಮಾನ್ ಧ್ವಜ ಹಾರಿಸಲು ಯಾರದ್ದೂ ತಕರಾರು ಇಲ್ಲ. ಸರ್ಕಾರಿ ಜಾಗದಲ್ಲಿ ಹನುಮಾನ್ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಮಂಡ್ಯದಲ್ಲಿ ಹನುಮಾನ ಧ್ವಜ ಇಳಿಸಿದ ಕುರಿತು ಪ್ರತಿಕ್ರಿಯಿಸಿ,
ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ. ಬಳಿಕ ಕೆಲವು ಪ್ರತಿಭಟನೆಗಳು ನಡೆದವು ” ಎಂದು ಸ್ಪಷ್ಪಪಡಿಸಿದರು.
” ಲಘು ಲಾಠಿ ಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಶಾಂತಿಕಾಪಾಡುವಂತೆ ಮನವಿ ಮಾಡಿದ್ದೇನೆ ” ಎಂದರು. ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ ಎಂದು ತಿರುಗೇಟು ನೀಡಿದರು.