ಬೆಂಗಳೂರು ಗ್ರಾಮಾಂತರ: ನಿರ್ಮಾಣ ಹಂತದ ಕಟ್ಟಡಕ್ಕೆ ಆಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದ ಮಹಿಳೆಯನ್ನು ಬೆಸ್ಕಾಂ ಸಿಬ್ಬಂದಿ ಪ್ರಶ್ನೆ ಮಾಡಿದ್ದಕ್ಕೆ ಕಪಾಳ ಮೋಕ್ಷ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ. ಇನ್ನೂ ಈ ಘಟನೆ 24ನೇ ತಾರೀಕು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹಳೆ ಚಂದಾಪುರ ಮೂಲದ ರೂಪ ಹಲ್ಲೆ ಮಾಡಿದ ಮಹಿಳೆ ಎನ್ನಲಾಗಿದೆ.. ಹರೀಶ್ ಹಲ್ಲೆಗೊಳಗಾದ ಬೆಸ್ಕಾಂ ಸಿಬ್ಬಂದಿ..
ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಕಳೆದ 24 ನೇ ತಾರೀಖಿನಂದು ಮಧ್ಯಾಹ್ನ 12:30ಕ್ಕೆ ವೀರಸಂದ್ರ ಬೆಸ್ಕಾಂ ಸಬ್ ಡಿವಿಷನ್ ಅಧಿಕಾರಿಗಳು ನಿರ್ಮಾಣ ಹಂತದ ಕಟ್ಟಡಕ್ಕೆ ಆಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದ ಮಹಿಳೆಯನ್ನು ಮನೆ ಬಳಿ ಹೋಗಿದ್ದಾರೆ ಆ ವೇಳೆ ಮಹಿಳೆ ಲೈನ್ ಮ್ಯಾನ್ ಹರೀಶ್ ಪ್ರಶ್ನೆ ಮಾಡಿದ್ದಾರೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ ..ವಿಚಾರ ತಿಳಿದು ವಿದ್ಯುತ್ ಲೈನ್ ಕಟ್ ಮಾಡಿದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ನಡು ರಸ್ತೆಯಲ್ಲಿ ಗುಂಡಾ ವರ್ತನೆ ತೋರಿ ಬಳಿಕ ಲೈನ್ ಮ್ಯಾನ್ ಹರೀಶ್ಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅಲ್ಲದೆ ಕರ್ತವ್ಯ ಅಡ್ಡಿ ಪಡಿಸಿದ್ದಾಳೆ.. ಅಲ್ಲದೆ ಮಹಿಳೆ ಮಹಿಳೆ ಯಾರನ್ನು ಕರ್ಕೊಂಡು ಬರ್ತಿಯೋ, ಕರ್ಕೊಂಡ್ ಬಾ ಹೋಗು, ಏನು ಮಾಡ್ಕೊಳಕ್ಕಾಗಲ್ಲ ಅಂತಲ್ಲ ಲೈನ್ ಮ್ಯಾನ್ ಗೆ ಅವಾಜ್ ಹಾಕಿದ್ದಾಳೆ. ಇನ್ನು ಬೆಸ್ಕಾಂ ಸಿಬ್ಬಂದಿಗಳು ಮಹಿಳೆಯ ಗೂಂಡ ವರ್ತನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ ಇನ್ನು ಈ ಬಗ್ಗೆ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಾತಿದಂತೆ ಮಹಿಳೆ ಎಸ್ಕೇಪ್ ಆಗಿದ್ದಾಳೆ.. ಇನ್ನೂ ಮಹಿಳೆಯಗಾಗಿ ಸೂರ್ಯನಗರ ಪೊಲೀಸ್ರು ಹುಡುಕಾಟವನ್ನು ನಡೆಸುತ್ತಿದ್ದಾರೆ ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….