ಬೆಂಗಳೂರು:- ತಲ್ಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ. ಗಾಳಪ್ಪ @ ಗುಟ್ಟೆಗಾಳಪ್ಪ ಕೊಲೆಯಾದ ವ್ಯಕ್ತಿ ಎನ್ನಲಾಗಿದೆ.
ತಲಘಟ್ಟಪುರದ ಚಿಕ್ಕೆಗೌಡನ ಪಾಳ್ಯದಲ್ಲಿ ಘಟನೆ ಜರುಗಿದೆ. ಶೆಡ್ಡ್ ವೊಂದರಲ್ಲಿ ಗಾಳಪ್ಪನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಗಾಳಪ್ಪ ಅಲಿಯಾಸ್ ಹುಚ್ಚುಗಾಳ ಕೊಲೆಯಾದ ರೌಡಿ ಶೀಟರ್ ಆಗಿದ್ದಾನೆ.
ಕೆಂಗೇರಿ ತಾವರೇಕೆರೆ ಪೊಲೀಸ್ ಠಾಣೆಯಲ್ಲಿ ಗಾಳಪ್ಪ ರೌಡಿ ಶೀಟ್ ಹೊಂದಿದ್ದ. ಎರಡು ಕೊಲೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ ಎನ್ನಲಾಗಿದೆ. ಇಂದು ಚಿಕ್ಕೆಗೌಡನ ಪಾಳ್ಯಕ್ಕೆ ಬಂದಿದ್ದ ವೇಳೆ ಘಟನೆ ಜರುಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.