ಭಾರತದ ವಿರುದ್ಧ ಇಂಗ್ಲೆಂಡ್ಗೆ 28 ರನ್ಗಳ ಜಯ ಸಿಕ್ಕಿದೆ. ಟಾಮ್ ಹಾರ್ಟ್ಲಿ 7 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
2ನೇ ಇನ್ನಿಂಗ್ಸ್ನಲ್ಲಿ ಭಾರತಕ್ಕೆ 231 ರನ್ ಗುರಿ ನೀಡಿದ್ದ ಇಂಗ್ಲೆಂಡ್ 202 ರನ್ಗಳಿಗೆ ಆಲೌಟ್ ಮಾಡಿತು. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು.
ಟೀಂ ಇಂಡಿಯಾದ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಲು ಯತ್ನಿಸಿದರು. ರೋಹಿತ್ 39 ರನ್ಗಳಿಸಿ ಔಟಾದರು. ನಂತರ ಬಂದ ಯಾವೊಬ್ಬ ಬ್ಯಾಟರ್ ಕೂಡ ಉತ್ತಮ ರನ್ ಕಲೆ ಹಾಕುವಲ್ಲಿ ವಿಫಲರಾದರು.
2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ನ ಒಲೀ ಪೊಪ್ ಅಮೋಘ ಬ್ಯಾಟಿಂಗ್ ಮಾಡಿದರು. 196 ರನ್ ಗಳಿಸಿದ ಅವರು ಕೇವಲ 4 ರನ್ಗಳಿಂದ ದ್ವಿಶತಕ ವಂಚಿತರಾದರು. ಇಂಗ್ಲೆಂಡ್ ಬೌಲರ್ ಟಾಮ್ ಹಾರ್ಟ್ಲಿ 7 ವಿಕೆಟ್ ಉರುಳಿಸಿ ತಂಡದ ಗೆಲುವಿಗೆ ಕಾರಣರಾದರು.