ಬಿಗ್ ಬಾಸ್ ಕನ್ನಡ 10 ವಿನ್ನರ್ ಘೋಷಣೆಗೆ ಕ್ಷಣಗಣನೆ ಶುರುವಾಗಿದ್ದು, ತುಕಾಲಿ ಸಂತು ಎಲಿಮಿನೇಟ್ ಆಗ್ತಿದ್ದಂತೆ ವರ್ತೂರು ಸಂತೋಷ್ ಕೂಡ ಎಲಿಮಿನೇಟ್ ಆಗಿದ್ದಾರೆ.
ಹಳ್ಳಿಕಾರ್ ವರ್ತೂರು ಸಂತೋಷ್ ಅವರು ಟಾಪ್ 2ನಲ್ಲಿ ಇರುತ್ತಾರೆ ಎಂದೇ ಭಾವಿಸಲಾಗಿತ್ತು. ಇದೀಗ ತುಕಾಲಿ ಸಂತು ಆಪ್ತ ಸ್ನೇಹಿತ ವರ್ತೂರು ಸಂತೋಷ್ಗೆ ದೊಡ್ಮನೆಯ ಆಟ ಅಂತ್ಯವಾಗಿದೆ.
ವರ್ತೂರು ಸಂತೋಷ್ ಅವರ ವಿಚಾರದಲ್ಲಿ ಅದೇನೇ ವಿವಾದವಾಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಟಫ್ ಫೈಟ್ ನೀಡಿದ್ದರು. ಮನೆಯಿಂದ ಹೊರಗೆ ಮತ್ತು ದೊಡ್ಮನೆಯಲ್ಲಿ ಸಾಕಷ್ಟು ಏಳು- ಬೀಳು ಕಂಡಿದ್ದರು ವರ್ತೂರು. ಅದನ್ನೆಲ್ಲಾ ಮೀರಿ ವರ್ತೂರು ಸಂತೋಷ್ ಸಖತ್ ಆಗಿ ಆಟ ಆಡಿದ್ದರು.
ಕೊನೆ ದಿನಗಳಲ್ಲಿ ವರ್ತೂರು ಸಂತೋಷ್ ಅವರ ನಟನೆ, ಮಿಮಿಕ್ರಿ ಎಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ದೊಡ್ಮನೆಯಿಂದ ವರ್ತೂರು ಸಂತೋಷ್ ಹೊರಬಂದಿದ್ದಾರೆ.