ಬಳ್ಳಾರಿ:- ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿದೆ.
ಭಾನುವಾರ ಒಂದು ಜೆಸಿಬಿ ಯಂತ್ರದ ಸಹಾಯದಿಂದ ಮೂರು ಟ್ರ್ಯಾಕ್ಟರ್ ವಾಹನಗಳಲ್ಲಿ ಅಕ್ರಮವಾಗಿ ಮಣ್ಣು ಸಂಗ್ರಹ ಮಾಡಲಾಗುತ್ತಿತ್ತು.ಇದನ್ನು ಗಮನಿಸಿದ ಸಿರುಗುಪ್ಪ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಪೊಲೀಸರು ಗಸ್ತಿನಲ್ಲಿದ್ದಾಗ ಜೆಸಿಬಿ ವಾಹನ ಸಂಖ್ಯೆ ಕೆಎ-34, ಬಿ-0925, ಟ್ರ್ಯಾಕ್ಟರ್ ವಾಹನಗಳ ಸಂಖ್ಯೆ, ಸ್ವರಾಜ್ ಟ್ರ್ಯಾಕ್ಟರ್ ವಾಹನ ಸಂಖ್ಯೆ ಕೆಎ-34, ಟಿಎ-6322, ಇನ್ನೊಂದು ಸ್ವರಾಜ್ ಟ್ಯಾಕ್ಟರ್ ವಾಹನ ಕೆಎ-34, ಟಿಎ-7602 ಮತ್ತು ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ಟ್ರ್ಯಾಕ್ಟರ್ ಸಹ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಿರುಗುಪ್ಪ ಪೊಲೀಸರು, ಠಾಣಾ ಆವರಣದಲ್ಲಿ ವಾಹನ ನಿಲ್ಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.